

ಮೈಸೂರು: ನಗರದ ಕೋರ್ಟ್ ಆವರಣದಲ್ಲೇ ಜನರೇಟರ್‌ನ ಬ್ಯಾಟರಿಯನ್ನು ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ.
ಜಯನಗರದ ಮಳಲವಾಡಿದಲ್ಲಿರುವ ನ್ಯಾಯಾಲಯದ ಜನರೇಟರ್‌ನ ಬ್ಯಾಟರಿ ಕಳವಾಗಿದ್ದು, ಈ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರ ಹಾಗೂ ಸಿಜೆಎಂ ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿ ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋರ್ಟ್ ಕಲಾಪಗಳ ಅನುಕೂಲಕ್ಕಾಗಿ ಜನರೇಟರ್ ಅಳವಡಿಸಲಾಗಿದೆ.
ಆದರೆ ವಾರದ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸ್ವಯಂ ಚಾಲಿತವಾಗಿ ಜನರೇಟರ್ ಆನ್ ಆಗಿಲ್ಲ.
ಗುತ್ತಿಗೆದಾರನಿಗೆ ವಾಹಿತಿ ನೀಡಿ, ಆತ ಕಳುಹಿಸಿದ್ದ ಎಲೆಕ್ಟ್ರಿಷಿಯನ್ ಮೂಲಕ ಪರಿಶೀಲಿಸಿದಾಗ ಜನರೇಟರ್‌ನ ಬ್ಯಾಟರಿ ಕಳವಾಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.