ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಮಂಗಳವಾರ ರಜೆ

WhatsApp Image 2022-08-27 at 5.18.23 PM
Published on

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸೋಮವಾರ ನೀಡಲಾಗುತ್ತಿದ್ದ ವಾರದ ರಜೆ ದಿನ ಬದಲಿಸಿ, ಮುಂದಿನ ವಾರದಿಂದ ಪ್ರತಿ ಮಂಗಳವಾರ, ವಾರದ ರಜೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.


ಇತ್ತೀಚೆಗೆ ಜಿಲ್ಲಾಧಿಕಾರಿರವರ ಅಧ್ಯಕ್ಷತೆಯಲ್ಲಿ ನಡೆದ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಹಿನ್ನೆಲೆಯಲ್ಲಿ ಪ್ರವಾಸಿ ಸಂದರ್ಶಕರ ಬೇಡಿಕೆಗೆ ಅನುಗುಣವಾಗಿ ಸೋಮವಾರ ಮ್ಯೂಸಿಯಂ ತೆರೆದು, ಪ್ರತಿ ಮಂಗಳವಾರ ತಿಮ್ಮಯ್ಯ ಮ್ಯೂಸಿಯಂಗೆ ವಾರದ ರಜೆ ನೀಡಲಾಗುತ್ತದೆ.


ಆ೨೯ ರಿಂದ ಅನ್ವಯ ಆಗುವಂತೆ ಪ್ರತೀ ಸೋಮವಾರ ತಿಮ್ಮಯ್ಯ ಸ್ಮಾರಕ ಭವನ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net