ಕೋಟ ಸಹಕಾರಿ ಸಂಘ ಶೇ.16 ಡಿವಿಡೆಂಡ್ ಘೋಷಣೆ

ca bank
ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಧನೆಗೈದ ಅನೇಕರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ 67ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಇತ್ತೀಚೆಗೆ ಜರುಗಿತು. ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿ, ಸಂಘ 13 ಶಾಖೆಗಳನ್ನು ಹೊಂದಿ ಉತ್ತಮ ಪ್ರಗತಿ ಸಾಧಿಸಿ 235.77 ಕೋಟಿ ರೂ. ಠೇವಣಿ, 186.15 ಕೋಟಿ ರೂ. ಸಾಲ ಹೊರ ಬಾಕಿಯಿದ್ದು, ವರದಿ ಸಾಲಿನಲ್ಲಿ 1,320 ಕೋಟಿ ರೂ. ವ್ಯವಹಾರ ನಡೆಸಿ 5.66 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.16ರ ಡಿವಿಡೆಂಡ್ ಘೋಷಿಸಿರುವುದಾಗಿ ತಿಳಿಸಿದರು.

ಗೀತಾನಂದ ಫೌಂಡೇಶನ್, ಕೋಟ ಪ್ರವರ್ತಕ ಆನಂದ ಸಿ.ಕುಂದರ್, ಸಂಘದ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ, ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಸಂಘದ ಉಪಾಧ್ಯಕ್ಷ ಜಿ.ರಾಜೀವ ದೇವಾಡಿಗ, ನಿರ್ದೇಶಕರಾದ ಕೆ.ಉದಯ ಕುಮಾರ್ ಶೆಟ್ಟಿ, ಟಿ.ಮಂಜುನಾಥ, ಜಿ.ತಿಮ್ಮ ಪೂಜಾರಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಾಜೇಶ್ ಉಪಾಧ್ಯ, ನಾಗರಾಜ ಹಂದೆ, ಪ್ರೇಮಾ ಎಸ್.ಪೂಜಾರಿ, ರಂಜಿತ್ ಕುಮಾರ್, ರಶ್ಮಿತಾ, ಭಾಸ್ಕರ ಶೆಟ್ಟಿ, ಕೆ.ಶ್ರೀಕಾಂತ ಶೆಣೈ ಮತ್ತು ಅಚ್ಯುತ ಪೂಜಾರಿ ಉಪಸ್ಥಿತರಿದ್ದರು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ಸಿಬ್ಬಂದಿ ಎಂ.ಮಂಜುನಾಥ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಯ ಶಾಲೆಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಅಂಗವಿಕಲ ದತ್ತಿನಿಧಿ ವಿತರಿಸಲಾಯಿತು. ಸಿಇಒ ಶರತ ಕುಮಾರ್ ಶೆಟ್ಟಿ ವಂದಿಸಿದರು. ನಿಶಾ ಆರ್.ಪೂಜಾರಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಟಿ.ಮಂಜುನಾಥ ಸ್ವಾಗತಿಸಿದರು. ಶಾಲಿನಿ ಹಂದೆ ಕಾರ್ಯಕ್ರಮ ನಿರೂಪಿಸಿದರು.

ಸಾಧಕರ ಅಭಿನಂದನೆ

2023-24ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ.ಟಿ.ಸೀತಾರಾಮ ಶೆಟ್ಟಿ ಮತ್ತು ಜ್ಯೋತಿ ಕೃಷ್ಣ ಪೂಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿ.ಲಕ್ಷ್ಮೀನಾರಾಯಣ ಕಾರಂತ, ರಾಜ್ಯಮಟ್ಟದ ಸರ್ಕಾರಿ ನೌಕರರ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಗರತ್ನ ಜಿ., ಡಾಕ್ಟರೇಟ್ ಪದವಿ ಪಡೆದ ಡಾ.ಎಚ್.ಜಿ.ಗಣೇಶ ಉರಾಳ, 2022-23ನೇ ಸಾಲಿನ ಜಿಲ್ಲಾಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ರಮೇಶ ಹೇರ್ಳೆ, ಕ್ರೀಡಾ ಸಾಧಕರಾದ ಶರತ್, ಚಿನ್ಮಯ್, ಪ್ರೇರಣಾ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net