ರೈಲ್ವೆ ನಿಲ್ದಾಣಕ್ಕೆ ಜನರಲ್ ಮ್ಯಾನೇಜರ್ ಭೇಟಿ- ಪರಿಶೀಲನೆ

railway station raichur
railway station raichur
Published on

ರಾಯಚೂರು ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರುಣಕುಮಾರ ಜೈನ್ ಬುಧವಾರ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಿಲ್ದಾಣದ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ, ಪ್ರಯಾಣಿಕರಿಗೆ ಲಭ್ಯವಿರುವ ಸೌಲಭ್ಯಗಳು, ನಿರ್ವಹಣೆ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಥಳೀಯ ಅಽಕಾರಿಗಳೊಂದಿಗೆ ಸಮಾಲೋಚಿಸಿದರು.

ವಿವಿಧ ವಿಭಾಗಗಳ ಅಽಕಾರಿಗಳೊಂದಿಗೆ ಪ್ಲಾಟ್-Áರ್ಮ್ಗಳು, ತಾತ್ಕಾಲಿಕ ನಿರೀಕ್ಷಾ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ, ಟಿಕೆಟ್ ಬುಕ್ಕಿಂಗ್ ಕೌಂಟರ್ ಹಾಗೂ ಪ್ರಯಾಣಿಕರ ಪ್ರತಿಸ್ಪಂದನ ಪಡೆಯುವ ಕೇಂದ್ರಗಳನ್ನು ಪರಿಶೀಲಿಸಿದರು. ಪ್ಲಾಟ್-Áರ್ಮ್ಗಳಲ್ಲಿ ಸ್ವಚ್ಛತೆ ಮತ್ತು ಸಿಸಿಟಿವಿ ಕ್ಯಾಮೆ ರಾಗಳ ಸ್ಥಿತಿಯನ್ನು ವೀಕ್ಷಿಸಿದರು. ಅಲ್ಲದೆ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಹೊಸ ಸೌಲಭ್ಯಗಳನ್ನು ಸೇರಿಸುವ ಬಗ್ಗೆ ಚರ್ಚಿಸಿದರು. ನಿಲ್ದಾಣದಲ್ಲಿ ಪ್ರಸ್ಥಾಪಿತ ಸುಧಾರಣೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಲ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಪ್ರಯಾಣಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ವಿಶೇಷವಾಗಿ, ರಾತ್ರಿ ಸಮಯದಲ್ಲಿ ನಿಲ್ದಾಣದ ಸುರಕ್ಷತೆ, ಕುಡಿಯುವ ನೀರಿನ ಅಗತ್ಯ, ಹೆಚ್ಚುವರಿ ಟಿಕೆಟ್ ಕೌಂಟರ್, ಲಿ-ï್ಟ ಮತ್ತು

ಎಸ್ಕಲೇಟರ್ ವ್ಯವಸ್ಥೆಗಳ ಅಗತ್ಯವನ್ನು ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಗಂಭೀರವಾಗಿ ಗಮನಹರಿಸುವುದಾಗಿ

ಜಿಎಮ್ ಭರವಸೆ ನೀಡಿದರು.

ರೈಲ್ವೆ ಇಲಾಖೆ ಅಽಕಾರಿಗಳೊಂದಿಗೆ ಸಭೆ ನಡೆಸಿ, ನಿಲ್ದಾಣದ ಅಭಿವೃದ್ಧಿಯ ಮುಂದಿನ ಹಂತಗಳ ಬಗ್ಗೆ ಸಮಾಲೋಚಿಸಿದರು. ರಾಯಚೂರು ರೈಲ್ವೆ ನಿಲ್ದಾಣವು ಪ್ರಮುಖ ಸಂಪರ್ಕ ಕೇಂದ್ರವಾಗಿರುವುದರಿAದ, ಇದನ್ನು ಸುಧಾರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್ ಅಶೋಕ್ ಕುಮಾರ ಮೀನಾ, ಮಾಜಿ ಬೋರ್ಡ್ ಸದಸ್ಯ ಬಾಬುರಾವ್,ಪ್ರಸಾದ್,ಹೇಮರಾಜು,ವಿಜಯ ಕುಮಾರ ಸೇರಿ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net