ಉಜಿರೆ ಕೈಗಾರಿಕೋದ್ಯಮಿಗಳ ಸಂಘದ ಮಹಾಸಭೆ

New Project (15)
Published on

ಬೆಳ್ತಂಗಡಿ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ವಾರ್ಷಿಕ ಮಹಾಸಭೆ ಉಜಿರೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಕಳೆದ 4 ವರ್ಷದಿಂದ ವರ್ತಕರ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಿ ಹಲವು ಸಮಾಜಮುಖಿ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಮತ್ತು ಸಂಘದ ಮೂಲಕ ಸಹಕಾರ ಸಂಘ ಪ್ರಾರಂಭ ಮಾಡುವ ಆಲೋಚನೆ ಇದ್ದು ಎಲ್ಲ್ಲ ವ್ಯಾಪಾರಸ್ಥರು ಸಂಘದ ಸದಸ್ಯರಾಗಿ ಸಹಕಾರ ನೀಡಬೇಕು ಎಂದರು.

ಮಹಾಸಭೆಯಲ್ಲಿ ಸದಸ್ಯರ ಸೂಚನೆಯಂತೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಂಘದ ಗೌರವಾಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಉಪಸ್ಥಿತಿಯಲ್ಲಿ ಮುಂದಿನ ಮೂರು ತಿಂಗಳ ಒಳಗೆ ನಡೆಸಲು ತೀರ್ಮಾನ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ಪ್ರವೀಣ್ ಫರ್ನಾಂಡಿಸ್, ಪದಾಧಿಕಾರಿಗಳು, ಸಲಹೆಗಾರರು, ಸದಸ್ಯರು, ವರ್ತಕರು ಸಲಹೆ-ಸೂಚನೆ ನೀಡಿದರು. ಸಂಘದ ಕೋಶಾಧಿಕಾರಿ ಅಬೂಬಕ್ಕರ್ ಲೆಕ್ಕಪತ್ರ ವಾಚಿಸಿದರು. ಜತೆ ಕಾರ್ಯದರ್ಶಿ ಪ್ರಸಾದ್ ಬಿ.ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಕ್ಷ್ಮಣ ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net