ಸೆ.೨೧ ರಂದು ಅರಮನೆಪಾಲೆ ಸಮಾಜದ ಮಹಾಸಭೆ

MANDANNA P.K
Published on

ಮಡಿಕೇರಿ: ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಮಹಾಸಭೆ ಸೆ.೨೧ ರಂದು ಬೆಳಿಗ್ಗೆ ೧೦ ಗಂಟೆಗೆ ಹಾಕತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜದ ಪ್ರಧಾನ ಸಂಘಟಕ ಪಿ.ಕೆ.ಮಂದಣ್ಣ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಮಂಜುನಾಥ್ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಹಾಸಭೆಯನ್ನು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ನಿರ್ದೇಶಕ ಅರಮನೆಪಾಲೆರ ದೇವಯ್ಯ, ಮಾಜಿ ಯೋಧರಾದ ಅರಮನೆಪಾಲೆರ ಸುಭಾಷ್, ಅರಮನೆಪಾಲೆರ ಸಿ.ಶಿವಪ್ಪ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ನಿರ್ದೇಶಕರಾದ ಅರಮನೆಪಾಲೆರ ಗಣೇಶ್ ಹಾಗೂ ಅರಮನೆಪಾಲೆರ ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ.

ಸಭೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿರುವ ಅವರು, ಸಮಾಜ ಬಾಂಧವರು ಕಡ್ಡಾಯವಾಗಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net