

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರತಿಯೊಬ್ಬನೂ ಪರೋಪಾಕರ, ಧೈರ್ಯ ಹಾಗೂ ಕ್ರಿಯಾಶೀಲತೆಯಿಂದ ಜೀವಿಸಬೇಕು. ಪರಸ್ಪರ ಸ್ನೇಹಜೀವಿಗಳಾಗಿ ಸೌಹಾರ್ದದಿಂದ ಬಾಳಿದಾಗ ನೆಮ್ಮದಿಯ ಸಮಾಜ ನಿರ್ಮಿಸಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ ಹೇಳಿದರು.
ಪಣೆಜಾಲು ಭಂಡಾರಿ ಸಮಾಜದ ಆವರಣದಲ್ಲಿ ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆಯ 14ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘ ಅಧ್ಯಕ್ಷ ಎಸ್.ಉಮೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಚಿಕಿತ್ಸಾ ವೆಚ್ಚಕೆಂದು ಭಂಡಾರಿ ಸಂಜೀವಿನಿ ಯೋಜನೆ ಮೂಲಕ ಮೂರು ಮಂದಿಗೆ ಧನಸಹಾಯ ನೀಡಲಾಯಿತು. ಜತೆಗೆ ಎ.ಪೂವಪ್ಪ ಭಂಡಾರಿ ಪಣೆಜಾಲು ಅವರನ್ನು ಸನ್ಮಾನಿಸಲಾಯಿತು. ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಸುಧಾಕರ ಭಂಡಾರಿ, ಬೆಳ್ತಂಗಡಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಂಘ ಉಪಾಧ್ಯಕ್ಷ ದಿವಾಕರ ಭಂಡಾರಿ ನಾರಾವಿ, ಮಡಂತ್ಯಾರು ಜೆಸಿಐನ ಪ್ರಥಮ ಮಹಿಳಾ ಅಧ್ಯಕ್ಷೆ ಅಮಿತಾ ಅಶೋಕ ಗುಂಡ್ಯಲ್ಕೆ ಅವರನ್ನು ಗೌರವಿಸಲಾಯಿತು. ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಪುರಸ್ಕಾರ ಪ್ರದಾನಿಸಲಾಯಿತು. ವಿಶ್ವನಾಥ ಭಂಡಾರಿ ಉಜಿರೆ ಉಪಸ್ಥಿತರಿದ್ದರು. ಬಾಲಕೃಷ್ಣ ಭಂಡಾರಿಕೋಡ್ಯೇಲು ಸ್ವಾಗತಿಸಿದರು. ಅಶೋಕ್ ಸಂಘದ ವಾರ್ಷಿಕ ವರದಿ ವಾಚಿಸಿದರು. ಸತೀಶ್ ನಾಳ ವಂದಿಸಿದರು. ನಾರಾಯಣ ಬಿಕುಂಡದಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
General Assembly of the Bhandari Sangha