ರಸ್ತೆಗಳ ಗುಂಡಿ ಮುಚ್ಚುವಲ್ಲಿ ಆರಂಭವಾದ ಸಾಮಾನ್ಯ ಸಭೆ ಗುಂಡಿಗಳ ಮುಚ್ಚಲು ಸರ್ಕಾರದಿಂದ ಅನುದಾನ ಬರುವುದಿಲ್ಲ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿಕೆ

raichur
raichur
Published on

ರಾಯಚೂರು ಬಹುದಿನಗಳ ನಂತರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಆರಂಭದಲ್ಲಿಯೇ ಶಾಸಕ ಡಾ. ಶಿವರಾಜ ಪಾಟೀಲ್ ಹಾಗೂ ಆಡಳಿತ ಪಕ್ಷದ ಪಾಲಿಕೆ ಸದಸ್ಯ ಜಯಣ್ಣ ರ ನಡುವೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ ಕುರಿತು ಮಾತಿನ ಚಕಮುಕಿ ಮಂಗಳವಾರ ನಡೆಯಿತು.

ನಗರದ ಜಿಪಂ ಸಭಾಂಗಣದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಿತು. ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ವರಿಗೆ ಕೇಳಿದ ಪ್ರೆಶ್ನೆಗೆ ಆಡಳಿತ ಮಹಾನಗರ ಪಾಲಿಕೆ ವಿಫಲವಾದರೆ, ಆಡಳಿತ ಪಕ್ಷದ ಪರವಾಗಿ ನಾನು ಸಭೆಯಲ್ಲಿ ಉತ್ತರ ನೀಡುವೆ ಎಂದ ಜಯಣ್ಣ ಮಾತಿಗೆ, ಶಾಸಕ ಡಾ.ಶಿವಾರಜ ಪಾಟೀಲ್ ಪ್ರತಿಕ್ರಿಯಿಸಿ ಮಹಾನಗರ ಆಡಳಿತ ವೈಫಲ್ಯವೇ ನೀವು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತೀರಾವೆಂದು ತಿಳಿಯುತ್ತದೆ.

ಬೆಂಗಳೂರಿನಿಂದ ರಾಯಚೂರುವರೆಗೆ ಗುಂಡಿ ಮುಚ್ಚುವ ಕಾರ್ಯಕ್ಕೆ ಸರ್ಕಾರದಿಂದ ಶಾಸಕರಿಗೆ ಅನುದಾನ ಬರುವುದಿಲ್ಲ. ಕೇವಲ ರಸ್ತೆ ನಿರ್ಮಾಣ ಹಾಗೂ ಹೊಸ ಕಾಮಗಾರಿಗಳ ಪ್ರಾರಂಭಕ್ಕೆ ಮಾತ್ರ ಅನುದಾನ ಬರುತ್ತಿದೆ. ಗುಂಡಿ ಮುಚ್ಚುವ ಕೆಲಸಕ್ಕೆ ಶಾಸಕರಿಗೆ ಅನುದಾನ ಬಂದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಅನುದಾನ ಬಂದರೆ 50 ಲಕ್ಷ ಅನುದಾನ ನೀಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ, ಚುನಾಯಿತಜನಪ್ರತಿನಿಧಿಗಳಾಗಿ ನಗರದ ಗುಂಡಿ ಮುಚ್ಚುವದು ನಮ್ಮೇಲ್ಲರ ಜವಬ್ದಾರಿಯಾಗಿದೆ. ಸರ್ಕಾರ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಪ್ರಯತ್ನಿಸೋಣ ಎಂದು ಹೇಳುವ ಮೂಲಕ ಚರ್ಚೆಗೆ ವಿರಾಮ ಹಾಕಿದರು.

ಮಹಾನಗರ ಪಾಲಿಕೆಯ ಮಳಿಗೆಗಳಿಗೆ ಹಿಂದಿನಿಂದಲೂ ಒಂದೇ ಬಾಡಿಗೆಯನ್ನು ನಿಗಧಿಪಡಿಸಲಾಗಿದೆ. ಬಾಡಿಗೆ ದರವನ್ನು ಹೆಚ್ಚಳ ಮಾಡಿಲ್ಲ ಜೊತೆಗೆ ಮಳಿಗೆಯನ್ನು ಬಾಡಿಗೆ ಪಡೆದವರು ಹೆಚ್ಚಿನ ಬೆಲೆಗೆ ಬೇರೆಯವರಗೆ ಬಾಡಿಗೆ ನೀಡಿರುವ ಬಗ್ಗೆ ಮಾಹಿತಿಯಿದ್ದು, ಇದನ್ನು ಸರಿಪಡಿಸಲು ಪಾಲಿಕೆ ಮುಂದಾಗಬೇಕು. ನಗರದಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ 282 ಮಳಿಗೆಗಳಲ್ಲಿ 172 ಮಳಿಗೆಗಳಿಂದ ಬಾಡಿಗೆ ಪಡೆಯಲಾಗುತ್ತಿದ್ದು, ಹಿಂದಿನಿಂದ 600-700 ರೂ. ವರೆಗೆ ಬಾಡಿಗೆ ಪಡೆಯಲಾಗುತ್ತಿದೆ. ಇದನ್ನು ಪರಿಷ್ಕರಿಸಿ ಬಾಡಿಗೆ ದರ ಹೆಚ್ಚಳ ಮಾಡಬೇಕು ಎಂದರು.

ಪಾಲಿಕೆ ಸದಸ್ಯ ದರೂರ್ ಬಸವರಾಜ ಮಾತನಾಡಿ, ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡವರೇ ಬೇರೆ ಯಾಗಿರುತ್ತಾರೆ. ಅಲ್ಲಿ ವ್ಯಾಪಾರ ಮಾಡುವವರೇ ಬೇರೆಯಾಗಿರುತ್ತಾರೆ. ಇದನ್ನು ಮೊದಲು ಪರಿಶೀಲಿಸಬೇಕು. ಬಾಡಿಗೆ ಪಡೆದಾಗ ನೀಡುವ ಒಪ್ಪಂದ ಪತ್ರ ಹಾಗೂ ಅಲ್ಲಿ ವ್ಯಾಪಾರಕ್ಕಾಗಿ ನೀಡುವ ವ್ಯಾಪಾರ ಪರವಾನಿಗೆಯನ್ನು ಪರಿಶೀಲಿಸಬೇಕು ಎಂದರು.

ಸದಸ್ಯ ಎನ್.ಶ್ರೀನಿವಾಸರೆಡ್ಡಿ ಮಾತನಾಡಿ, ಬಾಡಿಗೆಗೆ ನೀಡಿದ ಮಳಿಗೆಗಳನ್ನು ಬಾಡಿಗೆ ಪಡೆದವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಜೊತೆಗೆ ಕಟ್ಟಡ ವರ್ಗಾವಣೆಯನ್ನೂ ಪಾಲಿಕೆಯ ಅಧಿಕಾರಿಗಳೇ ಹಿಂದೆ ಮಾಡಿರುವುದು ಗಮನಾರ್ಹ ಕೂಡಲೇ ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಜುಬೆನ್ ಮೊಹಪಾತ್ರ,ಉಪಾಧ್ಯಕ್ಷ ಸಾಜೀದ್ ಸಮೀರ್, ಪಾಲಿಕೆ ಪರಿಸರ ಅಧಿಕಾರಿ ಜಯಪಾಲ ರೆಡ್ಡಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net