ಹೈನುಗಾರಿಕೆ ರೈತರಿಗೆ ವರದಾನ

General Annual Meeting of All Members
mpcs meeting in nandagudi
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆ ಜತೆಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಬಮುಲ್ ಮಾರ್ಗ ವಿಸ್ತರಣಾಧಿಕಾರಿ ಟಿ.ಎಂ.ಆನಂದ್ ತಿಳಿಸಿದರು.
ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ರಾಸುಗಳಿಗೆ ತಪ್ಪದೆ ವಿಮೆ ಮಾಡಿಸಬೇಕು. ಅಕಾಲಿಕ ಮರಣ ಹೊಂದಿದ ರಾಸುಗಳಿಗೆ ವಿಮೆ ಹಣ ದೊರೆಯುವುದರಿಂದ ನಷ್ಟದ ಪ್ರಮಾಣ ತಗ್ಗಲಿದೆ. ಅನಾರೋಗ್ಯಕ್ಕೆ ಈಡಾದ ರೈತ ಕುಟುಂಬದ ಸದಸ್ಯರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಮುಲ್ ಒಕ್ಕೂಟ ಭರಿಸಲಿದೆ. ಬಡ ರೈತರು ರಾಸು ಕೊಳ್ಳಲು 5 ಮಂದಿಯ ಗುಂಪಿಗೆ ತಲಾ 1 ಲಕ್ಷ ರೂ.ಸಾಲ ನೀಡಲಾಗುವುದು. ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡುವ ಜತೆಗೆ ರೋಗಗಳು ಬಾರದಂತೆ ಅಯುರ್ವೇದ ಮೂಲಿಕೆ ಬಳಕೆ ಮಾಡಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಕೆ, ಸ್ವಚ್ಛತೆಯಿಂದ ಕೆನೆ ಭರಿತ ಹಾಲು ಉತ್ಪಾದಿಸಿ, ಹೆಚ್ಚಿನ ಲಾಭ ಗಳಿಸಬೇಕು ಎಂದರು.
ಸಂಘವು 9.7ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ರೈತರಿಗೆ ಶೇ.3.6 ಬೋನಸ್ ವಿತರಿಸಲಾಗುವುದು ಎಂದರು.
ನಿರ್ದೇಶಕರಾದ ರಾಮೇಗೌಡ, ರಾಮಾಂಜಿನಪ್ಪ, ಮುನಿರಾಜು, ವೆಂಕಟೇಶ್, ರೂಪಾ, ವರಲಕ್ಷ್ಮಮ್ಮ, ಮಂಜುನಾಥ್, ಮುನಿಕೃಷ್ಣ, ಮುನಿಯಪ್ಪ, ಆಶಾ, ಎಂ.ರೂಪಾ, ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ, ಹಾಲು ಪರೀಕ್ಷಕ ಮಂಜುನಾಥ್, ಸಹಾಯಕ ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net