ಹೆಡಕನಹಳ್ಳಿ ಎಂಪಿಸಿಎಸ್‌ಗೆ ₹5.23 ಲಕ್ಷ ಲಾಭ

General Annual General Meeting
General Annual General Meeting
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹಾಲು ಉತ್ಪಾದಕರಿಗೆ ಬಮುಲ್‌ನಿಂದ ಹೆಚ್ಚುವರಿ ಪ್ರೋತ್ಸಾಹ ಧನ ನೀಡಿ, ಆರ್ಥಿಕವಾಗಿ ಸಬಲರಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಮುಲ್ ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಡಾ.ಶಿವಾಜಿ ನಾಯಕ್ ತಿಳಿಸಿದರು.
ಹೋಬಳಿಯ ಬೈಲನರಸಾಪುರ ಗ್ರಾಪಂನ ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಕೃಷಿಕರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆ ಜತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ಸಂಘವು 5.23 ಲಕ್ಷ ರೂ. ಲಾಭಗಳಿದ್ದು, ಈ ಪೈಕಿ 3.86 ಲಕ್ಷ ರೂ. ನಿವ್ವಳ ಲಾಭ ಬಂದಿದೆ. ಉತ್ಪಾದಕರಿಗೆ ಶೇ.3.78 ಬೋನಸ್ ವಿತರಿಸಲಾಗುವುದು ಎಂದರು.
ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಆನಂದ್ ಮಾತನಾಡಿ, ಹಾಲು ಉತ್ಪಾದಕರಿಗೆ ಹಾಗೂ ರಾಸುಗಳಿಗೆ ಬಮುಲ್‌ನಿಂದ ವಿಮಾ ಯೋಜನೆ ಕಡ್ಡಾಯವಾಗಿದೆ. ಹಾಗೆಯೇ, ಗುಣಮಟ್ಟದ ಹಾಲು ಪಡೆಯಲು ಪೌಷ್ಟಿಕಾಂಶ ಭರಿತ ಆಹಾರ ನೀಡುವುದಲ್ಲದೆ, ರೋಗಗಳು ಬಾರದಂತೆ ಕಾಲ-ಕಾಲಕ್ಕೆ ಲಸಿಕೆ ಹಾಕಿಸಬೇಕು ಎಂದರು.
ಗ್ರಾಪಂ ಸದಸ್ಯ ಎನ್.ಡಿ.ಬೈರೇಗೌಡ, ನಿರ್ದೇಶಕರಾದ ಎಚ್.ಎನ್.ಬೈರೇಗೌಡ, ಶ್ರೀನಿವಾಸ್, ಎಚ್.ಸಿ.ಬೈರೇಗೌಡ, ಮುನಿರಾಜು, ಸಂಗೀತಾ, ವೆಂಕಟಲಕ್ಷ್ಮಮ್ಮ, ಸುಜಾತಾ, ಶಾಮಲಮ್ಮ, ಎಚ್.ಎ.ಪ್ರಕಾಶ್, ಮುಖಂಡರಾದ ವೆಂಕಟಸ್ವಾಮಪ್ಪ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಎಸ್.ದಿವಾಕರ್, ಸಹಾಯಕ ಬಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net