ಲಿಂಗಭೇದದ ವಿರುದ್ಧ ಕಟು ಟೀಕೆ

21 Ylb 01
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಪಂನಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಚಂದ್ರಶೇಖರ ಹಡಪದ, ಸುಭಾಷ ಅಡಪದ, ಹನುಮಂತಪ್ಪ ಹಡಪದ, ಕಲ್ಲಪ್ಪ ಹಡಪದ, ಬಸವರಾಜ ಹಡಪದ, ಕಳಕಪ್ಪ ಹಡಪದ, ಸುರೇಶ, ಅಪ್ಪಣ್ಣ ಇದ್ದರು.
Published on

ಯಲಬುರ್ಗಾ: ವಚನಗಳ ಮೂಲಕ ಸಮಾನತೆ ಕ್ರಾಂತಿ ಸಾರಿದ ಹಡಪದ ಅಪ್ಪಣ್ಣ ಆದರ್ಶ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹಡಪದ ಸಮುದಾಯ ಮುಖಂಡ ಚಂದ್ರಶೇಖರ ಹಡಪದ ಹೇಳಿದರು.

ತಾಲೂಕಿನ ಬಂಡಿ ಗ್ರಾಪಂಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ತಾಂಡವಾಡುತ್ತಿದ್ದ ಅನೇಕ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದ ಬಸವಾದಿ ಶರಣರ ಸಾಲಿನಲ್ಲಿ ಹಡಪದ ಅಪ್ಪಣ್ಣ ಅಗ್ರಗಣ್ಯರು.

ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಜಾತಿ, ಲಿಂಗಭೇದದ ವಿರುದ್ಧ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಯುವ ಜನಾಂಗ ಅಂಥ ಮಹನೀಯರ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net