ಲಿಂಗ ಧಾರಣೆಯಿಂದ ಲಿಂಗಾಯತ ಧರ್ಮ ವೃದ್ಧಿ

12Muragod1
Published on

ಮುರಗೋಡ: ವಿದೇಶಗಳಲ್ಲಿ ಧರ್ಮ ಜಾಗತಿಗಾಗಿ ಲಿಂಗಾಯಿತರು ಲಿಂಗ ಧರಿಸಿದರೆ ಮಾತ್ರ ಲಿಂಗಾಯತ ಧರ್ಮ ಬೆಳೆಯಲು ಸಾಧ್ಯ ಎಂದು ಭಾಲ್ಕಿ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು.

ಸ್ಥಳಿಯ ಮಹಾಂತ ದುರದುಂಡೇಶ್ವರ ಮಠದಲ್ಲಿ ಮಹಾಂತ ಶಿವಯೋಗಿಗಳ 53ನೇ ಪುಣ್ಯ ಸ್ಮರಣೋತ್ಸವ ಮಹಾ ರಥೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ಲಿಂಗ ಧರಿಸುವವರೇ ಕಡಿಮೆಯಾಗಿದ್ದಾರೆ, ಲಿಂಗಾಯತರು ಲಿಂಗ ಧರಿಸಿ ಲಿಂಗಪೂಜೆ ಮಾಡಿದರೆ ಎಂತಹ ಸಂಕಷ್ಟ ನಿವಾರಿಸುವ ಶಕ್ತಿ ಲಿಂಗಾಯತ ಧರ್ಮದಲ್ಲಿ ಇದೆ ಎಂದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹುಲಸೂರು ಮಠದ ಡಾ.ಶಿವಾನಂದ ಸ್ವಾಮೀಜಿ, ಮುನವಳ್ಳಿ ಮುರುಂದ್ರ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಕಮತಗಿ ಹುಚ್ಚೇಶ್ಚರ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ,ದೊಡವಾಡ ಜಡಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು.

ಉದ್ಯಮಿ ಪರ್ವತಗೌಡ ಪಾಟೀಲ, ಶಂಕರ ಬಾಳಿ, ವಿ.ಡಿ.ದೇಸಾಯಿ, ಮಲ್ಲಯ್ಯ ಮಾಸ್ತಮರಡಿ, ಜಿಲ್ಲಾ ಶಿಕರ ಸಂದ ಉಪಾಧ್ಯ ಮಲ್ಲಿಕಾರ್ಜುನ ಸಿದ್ಧನಗೌಡರ, ಮಲ್ಲಪ್ಪ ಕುರಬೇಟ, ಶಿವನಗೌಡ ಪಾಟೀಲ, ಸುರೇಶ ಮ್ಯಾಕಲ, ಚನ್ನಪ್ಪ ಕುರಬೇಟ, ಲಕ್ಷಿ$್ಮ ಗುಡಸೆ. ರಾಜಶ್ರೀ ಹಿರೇಮಠ, ವಿಜಯ ಸಾಣಿಕೂಪ್ಪ, ಗ್ರಾಪಂ ಸದಸ್ಯರು, ಜಾತ್ರೆ ಉತ್ಸವ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net