

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ಜೆಮ್ (ಜಿಇಎಂ-ಗವರ್ನಮೆಂಟ್ ಇ ಮಾರ್ಕೆಟ್ ಪ್ಲೇಸ್) ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಸರ್ಕಾರಿ ಇ ಮಾರ್ಕೆಟ್ ಸಲಹೆಗಾರರಾದ ಸಂದೇಶ ಅಜ್ಜರಾಣಿ ಹಾಗೂ ಟಿ.ಎಸ್. ವೀರಮಣಿ ಉದ್ದಿಮೆದಾರರಿಗೆ ಜೆಮ್ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಯುವ ಉದ್ದಿಮೆದಾರರ ಸಮಿತಿ ಚೇರಮನ್ ಶಾಶ್ವತ ಪೂಜಾರ, ಗ್ರೇಟರ್ ಹು-ಧಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಜಯ ಭಾರತಿ, ಜೀನದತ್ತ ಓಸ್ತವಾಲ, ನಿಖಿಲ ಠಕ್ಕರ್, ಅಶೋಕ ಗಡಾದ, ಇತರರು ಇದ್ದರು.
ವ್ಯಾಪಾಸ್ಥರಿಗೆ ಹಾಗೂ ಉದ್ದಿಮೆದಾರರಿಗೆ ಜೆಮ್ ನೋಂದಣಿ ಮಾಡಿಸಿಕೊಳ್ಳಲು ಆ. 11ರವರೆಗೆ ಅವಕಾಶ ಕಲ್ಪಿಸಲಾಗಿದೆ.