ಮಾತೆ ದೇಯಿ ಬೈದ್ಯೆತಿ ಮಹಾ ನೇಮೋತ್ಸವ

daiva
Published on

ಈಶ್ವರಮಂಗಲ: ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರದಲ್ಲಿ ಒಂದು ವಾರ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಮೂಲಸ್ಥಾನ ಗರಡಿ ನೇಮೋತ್ಸವ ಲಕ್ಷಾಂತರ ಭಕ್ತರ ಒಗ್ಗೂಡುವಿಕೆಯೊಂದಿಗೆ ಸೋಮವಾರ ಸಮಾಪನಗೊಂಡಿತು.

ಭಾನುವಾರ ರಾತ್ರಿ ಕ್ಷೇತ್ರದ ಮೂಲ ಗರಡಿಯಲ್ಲಿ ಕೋಟಿ- ಚೆನ್ನಯರ ದರ್ಶನ, ಬೆರ್ಮೆರ್ ಗುಂಡದಲ್ಲಿ ಫಲ ಸಮರ್ಪಣೆ, ಬಳಿಕ ವೀರಪಥದಲ್ಲಿ ಕೋಟಿ- ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ, ಮಾತೆ ಮತ್ತು ಮಕ್ಕಳ ಸಮಾಗಮ ಕಾರ್ಯಕ್ರಮಗಳು ನಡೆದವು. ಬಳಿಕ ಕೋಟಿ ಚೆನ್ನಯರ ಮೂಲಸ್ಥಾನ ಗರಡಿಯಲ್ಲಿ ಕೋಟಿ- ಚೆನ್ನಯರ ನೇಮೋತ್ಸವ ಆರಂಭಗೊಂಡು ಬೆಳಗ್ಗಿನ ತನಕ ನೆರವೇರಿತು.

ಸೋಮವಾರ ಬೆಳಗ್ಗೆ ಸತ್ಯಧರ್ಮ ಚಾವಡಿಯಲ್ಲಿ ಕಲಶ ಹೋಮ ಬಳಿಕ ದೇಯಿ ಬೈದ್ಯೆತಿ ಮಹಾನೇಮ ನಡೆಯಿತು. ಇದೇ ಮೊದಲ ಬಾರಿಗೆ ದೇಯಿ ಬೈದ್ಯೆತಿ ನೇಮ ಮತ್ತು ನೃತ್ಯ ಬಲಿಸೇವೆ ಉತ್ಸವ ನೋಡುವ ಭಾಗ್ಯ ಭಕ್ತರ ಪಾಲಿಗೆ ಒದಗಿಬಂತು. ಬಳಿಕ ಹೋಮ ಕಲಶ ನೆರವೇರಿಸಿ ಧ್ವಜಾವರೋಹಣ ನಡೆಯುವುದರೊಂದಿಗೆ 7 ದಿನಗಳ ಉತ್ಸವ ಸಮಾಪ್ತಿಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net