ಸುಳ್ಯದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಭೆ

11
Published on

ಸುಳ್ಯ: ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಜರುಗುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಯುವವಾಹಿನಿ ಸುಳ್ಯ ಘಟಕ ಹಾಗೂ ಬಿಲ್ಲವ ಸಂಘದ ನೇತೃತ್ವದಲ್ಲಿ ಸುಳ್ಯದಲ್ಲಿ ಜರುಗಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಸುಳ್ಯ ತಾಲೂಕು ನಗರಸಭೆ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಗೆಜ್ಜೆಗಿರಿ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಗೆಜ್ಜೆಗಿರಿ ವಲಯ ಪ್ರಮುಖರಾದ ನಾಗೇಶ್ ಬೈಕಂಪಾಡಿ, ವಿಜಯ ಕುಮಾರ್, ಸುಳ್ಯ ತಾಲೂಕು ಬಿಲ್ಲವ ಸಂಘ ಕಾರ್ಯದರ್ಶಿ ನವೀನ್ ಸಾರಕರೆ, ಯುವವಾಹಿನಿ ಸುಳ್ಯ ಘಟಕ ಅಧ್ಯಕ್ಷರು ಹರೀಶ್ ಬೆಳ್ಳಾರೆ, ಕಾರ್ಯದರ್ಶಿ ನವೀನ್ ರಾಮಕುಮೇರಿ, ಸಂಘಟನಾ ಕಾರ್ಯದರ್ಶಿ ಲೋಹಿತ್ ರೆಂಜಾಳ, ಯುವವಾಹಿನಿ ಘಟಕದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನೂತನ ಪ್ರವೀಣ್ ನೆಟ್ಟಾರು ಸ್ವಾಗತಿಸಿದರು. ಜೀವಿತಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net