ಮೈಸೂರಿನಲ್ಲಿ ಡಿಸೆಂಬರ್ 1ರಂದು ಗೆಜ್ಜಲಟ್ಟಿ ನಾಟಕ ಪ್ರದರ್ಶನ

Published on

ಮೈಸೂರು: ರೋಟರಿ ಕ್ಲಬ್ ಎಚ್.ಡಿ.ಕೋಟೆಯಿಂದ ಡಿಸೆಂಬರ್ 1ರಂದು ನಗರದಲ್ಲಿ ಹೊರೆಯಾಲ ದೊರೆಸ್ವಾಮಿ ರಚನೆಯ ಗೆಜ್ಜಲಟ್ಟಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ನಿರಂಜನ್ ತಿಳಿಸಿದರು.

ಕಲಾಮಂದಿರದ ಕಿರುರಂಗಮಂದಿರದಲ್ಲಿ ಅಂದು ಸಂಜೆ 6ಕ್ಕೆ ಎಸ್.ರಾಮು ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಲಬ್‌ನಿಂದ ಆಯೋಜಿಸಿರುವ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಸಹಾಯಾರ್ಥವಾಗಿ ಈ ನಾಟಕ ಆಯೋಜನೆ ಮಾಡಲಾಗಿದೆ. ಮಾಹಿತಿಗಾಗಿ ಮೊ. 9945049479, 9880919339 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಕ್ಲಬ್ ಕಾರ್ಯದರ್ಶಿ ಬಿ.ಎನ್.ಶಿವಣ್ಣ, ವಲಯ ಸೇನಾನಿ ಸಿ.ವೈ.ಗಣೇಶ್ ಲಾಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net