ಸಂಗೀತವನ್ನು ಆಹ್ಲಾದಿಸುವ ಪ್ರಾಣಿ ಪಕ್ಷಿ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಹೇಳಿಕೆ

Geethothsava)
Published on

ಮಂಡ್ಯ: ಸಂಗೀತಕ್ಕೆ ಅಗಾಧವಾದ ಶಕ್ತಿ ಇದೆ. ಮನುಷ್ಯರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳೆಲ್ಲವೂ ಸಂಗೀತವನ್ನು ಅಹ್ಲಾದಿಸುತ್ತವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕಲಾಶ್ರೀ ಮ್ಯೂಸಿಕಲ್ ಟ್ರಸ್ಟ್‌ನ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಾಣಿ ಜಯರಾಂ, ದೊರೆಭಗವಾನ್ ನೆನಪಿನ ಗೀತೋತ್ಸವ ಹಾಗೂ ಸಾಧಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ತಲೆದೂಗದವರೇ ಇಲ್ಲ. ಕೆಲವು ಕಡೆಗಳಲ್ಲಿ ತಮ್ಮ ದನದ ಕೊಟ್ಟಿಗೆಗಳಲ್ಲಿ ಸಂಗೀತವನ್ನು ಜಾನುವಾರುಗಳಿಗೆ ಕೇಳಿಸುವ ಕೆಲಸವನ್ನು ಮಾಡುತ್ತಾರೆ ಎಂದರು.

ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವಂತಹ ಬಹುದೊಡ್ಡ ಅಸ ಸಂಗೀತ. ಸಂಗೀತದಿಂದ ಹಲವಾರು ರೋಗಗಳನ್ನೂ ವಾಸಿ ಮಾಡಬಹುದಾಗಿದೆ. ಮೈಸೂರಿನ ಮಹಾನಗರ ಪಾಲಿಕೆ ಅಧಿಕಾರಿ ನಾಗೇಶ್ ಹಾಗೂ ಸೆಸ್ಕ್ ಇಂಜಿನಿಯರ್ ಶ್ರೀನಿವಾಸ್ ಹವ್ಯಾಸಿ ಕಲಾವಿದರಾಗಿ ಸಂಗೀತವನ್ನು ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ. ಇವರಂತೆ ಹಲವರು ವಿವಿಧ ಇಲಾಖೆ, ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಹಾಡುವುದನ್ನು ಮರೆಯುವುದಿಲ್ಲ ಎಂದು ಹೇಳಿದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಹಿರಿಯ ಕಲಾವಿದ ಜಿ.ಎಸ್.ವಿಜಯಕುಮಾರ್, ದಂತತಜ್ಞ ಡಾ.ಪಿ.ಎಂ. ಯೋಗೇಂದ್ರಕುಮಾರ್, ಗುತ್ತಿಗೆದಾರ ಜಿ.ಎ.ರಮೇಶ್, ಉದ್ಯಮಿ ಜಿ.ಎನ್.ಗಿರೀಶ್, ಮಿಮ್ಸ್‌ನ ಪ್ರಾಧ್ಯಾಪಕ ಡಾ.ಆರ್.ಜಿ.ಸೋಮಸುಂದರ್, ಶಿಕ್ಷಕ ಕೆ.ಆರ್.ಶಶಿಧರ್ ಈಚಗೆರೆ, ನಿವೃತ್ತ ಪಿಡಿಒ ಎನ್.ಶಿವನಂಜು, ಪಿ.ಎ.ಜೋಸ್ೆ, ಎಂ.ಟಿ. ಶರತ್‌ಚಂದ್, ಪ್ರಸನ್ನಕುಮಾರ್, ಕಲಾಶ್ರೀ ಮ್ಯೂಸಿಕಲ್ ಟ್ರಸ್ಟ್‌ನ ಜಿ.ಕೆ.ಶಂಕರ್ ಇತರರಿದ್ದರು.

ಬೆಂಗಳೂರಿನ ಸೌಂಡ್ ಆ್ ಮ್ಯೂಸಿಕ್‌ನ ಗಾಯಕ ಕೆ. ಗುರುರಾಜ್ ಅವರನ್ನು ಅಭಿನಂದಿಸಲಾಯಿತು. ದೊರೆಭಗವಾನ್, ವಾಣಿ ಜಯರಾಂ ಅವರಿಗೆ ಗೀತ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net