ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ: ಪ್ರಣವಾನಂದ ಸ್ವಾಮೀಜಿ ಹೇಳಿಕೆ ವೈಯಕ್ತಿಕ

Geetha Shivarajkumar
Published on

ಮೈಸೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗೀತಾ ಶಿವರಾಜ್‌ಕುಮಾರ್ ಅವರನ್ನು ಬೆಂಬಲಿಸುವುದಿಲ್ಲ ಎಂಬ ಪ್ರಣವಾನಂದ ಸ್ವಾಮೀಜಿ ಹೇಳಿಕೆ ವೈಯಕ್ತಿಕವಾಗಿದೆ. ಇದು ಈಡಿಗ ಸಮುದಾಯದ ಹೇಳಿಕೆಯಲ್ಲ ಎಂದು ಜಿಲ್ಲಾ ಆರ್ಯ ಈಡಿಗ ಯುವ ವೇದಿಕೆ ಸ್ಪಷ್ಟಪಡಿಸಿದೆ.


ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ವರನಟ ಡಾ.ರಾಜಕುಮಾರ್ ಅವರನ್ನು ಸಮಾಜದ ಅಸ್ತಿತ್ವ ಎಂದು ಭಾವಿಸಿ ಮಂದುವರಿಯುತ್ತಿರುವ ಈಡಿಗ ಸಮಾಜದವರಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿಕೆ ಗೊಂದಲ ಸೃಷ್ಟಿಸಿದೆ. ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ವೇದಿಕೆ ಅಧ್ಯಕ್ಷ ಡಾ.ಎಸ್.ಟಿ.ರಾಜು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಸಮುದಾಯದ ಮುಖಂಡರಾದ ಮಹದೇವ್, ನಾರಾಯಣ್, ಕೆ.ಎಸ್.ಮುರಳಿ, ಕೆ.ಪಿ.ಗುರುಮೂರ್ತಿ, ತಮ್ಮಣ್ಣೇಗೌಡ, ಎನ್. ಕೃಷ್ಣಮೂರ್ತಿ, ಎಸ್.ಎನ್.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net