ಗೆಲ್ಲುವ ವಿಶ್ವಾಸವಿದೆ ಎಂದ ಗೀತಕ್ಕ

Congress candidate Geetha shivaraj kumar
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್
Published on

ಶಿವಮೊಗ್ಗ: ಕ್ಷೇತ್ರದಲ್ಲಿ ಎಲ್ಲ ಕಡೆ ಪ್ರಚಾರ ಮಾಡಿದ್ದೇವೆ. ಪ್ರಚಾರಕ್ಕೆ ಹೋದ ಕಡೆ ಜನರು ಪಾಸಿಟಿವ್ ಆಗಿದ್ದರು. ಮಹಿಳೆಯರು ಹೆಚ್ಚಿನ ಬೆಂಬಲ ಕೊಟ್ಟಿದ್ದಾರೆ. ಸ್ಥಳೀಯ ಮುಖಂಡರು ಬಹಳ ಸಹಕಾರ ನೀಡಿದ್ದು ಈ ಬಾರಿ ನಾನು ಗೆಲ್ಲುವ ವಿಶ್ವಾಸ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ತಿಳಿಸಿದರು.

ಪ್ರಚಾರಕ್ಕೆ ಹೋದ ಕಡೆ ಜನರು ಸಮಸ್ಯೆ ಹೇಳಿಕೋಂಡಿದ್ದಾರೆ. ಗೆದ್ದು ಬಂದರೆ ಎಲ್ಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡುತ್ತೇನೆ. ಈ ಚುನಾವಣೆಯಲ್ಲಿ ಯಾವುದೇ ನೆಗೆಟಿವ್ ಅಂಶ ಇಲ್ಲ, ಎಲ್ಲವೂ ಪಾಸಿಟಿವ್ ಅಂಶಗಳೇ ಆಗಿವೆ ಎಂದರು.
ಶಿವಮೊಗ್ಗದ ಜನರ ಆದಾಯ ದ್ವಿಗುಣಗೊಳಿಸುವುದು ಮತ್ತು ಭದ್ರಾವತಿಯ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳ ಪುನರಾರಂಭಕ್ಕೆ ಒತ್ತು ನೀಡಲಾಗುವುದು ಎಂದರು. ಲೀಡ್ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಗೆಲ್ಲುತ್ತೇನೆ ಅಷ್ಟೇ. ನಾನು ಎದುರಾಳಿ ಯಾರೆಂಬುದು ಮುಖ್ಯವಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net