

ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಜು.20 ರಂದು ಸಂಜೆ 6.30ಕ್ಕೆ ‘ಗೀತಧಾರೆ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಣೇಶ ದೇಸಾಯಿ ಅವರು ಗೀತಧಾರೆ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇವರ ಜತೆಗೆ ಚಾಂದನಿ ಗರ್ತಿಗೆರೆ ಹಾಡಲಿದ್ದಾರೆ. ಇವರಿಗೆ ಪಕ್ಕವಾದ್ಯದಲ್ಲಿ ಸಮೀರ್ ರಾವ್(ಕೊಳಲು), ರಂಜನ್ ಕುಮಾರ್ ಬೆವುರ (ಪಿಟೀಲು), ಆತ್ಮಾರಾಂ ನಾಯಕ್(ತಬಲಾ), ವಿನಯ್ ರಂಗಧೋಳ್(ರಿದಂ ಪ್ಯಾಡ್) ಸಹಕಾರ ನೀಡಲಿದ್ದಾರೆ.