

ಬೆಂಗಳೂರು: ಇದೇ ಡಿ.11ರಂದು ಗೀತಾ ಜಯಂತಿ ಅಂಗವಾಗಿ ನಾಗರಭಾವಿಯ ಓಂ ಯೋಗ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ವನಜಾಕ್ಷಿ ನಾಗೇಂದ್ರಪ್ಪ ತಿಳಿಸಿದ್ದಾರೆ.
ಶ್ರೀಕೃಷ್ಣ ಜಗತ್ತಿನ ಲೌಕಿಕ, ಪಾರಮಾರ್ಥಿಕ ಎಲ್ಲವನ್ನೂ ಒಳಗೊಂಡು ಅರ್ಜುನನಿಗೆ ಮಾಡಿರುವ ಉಪದೇಶದ ಸಾರ ಸಂಗ್ರಹ ಗ್ರಂಥವೇ ಭಗವದ್ಗೀತೆ. ಹಿಂದುಗಳ ಪವಿತ್ರ ಧರ್ಮಗ್ರಂಥ ಭಗವದ್ಗೀತೆಯು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಶ್ರೇಷ್ಠ ಸಿದ್ಧಾಂತಗ್ರಂಥ. 18 ಅಧ್ಯಾಯಗಳಿರುವ ಭಗವದ್ಗೀತೆಯಲ್ಲಿ ಒಟ್ಟು 700 ಶ್ಲೋಕಗಳಿವೆ. ಭಗವದ್ಗೀತೆಯನ್ನು ಲೋಕಮಾನ್ಯಗೊಳಿಸುವುದಕ್ಕಾಗಿ ಪ್ರತಿವರ್ಷ ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಇದೇ ಡಿ.11 ಬುಧವಾರ ಗೀತಾ ಜಯಂತಿ ಇರುವುದರಿಂದ ಓಂ ಯೋಗ ಕೇಂದ್ರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅಖಂಡ ಭಗವದ್ಗೀತೆ ಪಾರಾಯಣ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗವಹಿಸಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: 9972655004 ಸಂಪರ್ಕಿಸಬಹುದು.