2028ರ ವಿಧಾನಸಭೆ ಚುನಾವಣೆಗೆ ಸಜ್ಜಾಗಿ

06 08 2025_BGR RURAL_PAGE_5B
ನೆಲಮಂಗಲದಲ್ಲಿ ಜೆಡಿಎಸ್​ ಬುಧವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಜೆಡಿಎಸ್​ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಚಾಲನೆ ನೀಡಿದರು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್​ ಮಾಜಿ ಇ.ಕೃಷ್ಣಪ್ಪ, ಬಮುಲ್​ ನಿರ್ದೇಶಕ ಭವಾನಿಶಂಕರ್​ಬೈರೇಗೌಡ, ಜೆಡಿಎಸ್​ ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನ್ನೇಗೌಡ ಇತರರು ಇದ್ದರು.
Published on

ನೆಲಮಂಗಲ : ರಾಜ್ಯಾದ್ಯಂತ ಜೆಡಿಎಸ್​ ಬಲಪಡಿಸಲು ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಅತಿ ಹೆಚ್ಚು ಸದಸ್ಯತ್ವ ಮಾಡಿಸುವ ಮೂಲಕ ಹೆಚ್ಚಿನ ಶಕ್ತಿ ನೀಡಬೇಕು ಎಂದು ಜೆಡಿಎಸ್​ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಮನವಿ ಮಾಡಿದರು.

ನಗರದ ಎಂವಿಎಂ ಕನ್ವೆನ್ಷನ್​ ಹಾಲ್​ನಲ್ಲಿ ಜೆಡಿಎಸ್​ನಿಂದ ಬುಧವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಭಾಷಣ ಮಾಡಿದರಷ್ಟೇ ಪಕ್ಷ ಸಂಟನೆ ಸಾಧ್ಯವಿಲ್ಲ. ಕಾರ್ಯಕರ್ತರನ್ನು ಸಂಟಿಸಿ ತಳಮಟ್ಟದಲ್ಲಿ ಪಕ್ಷ ಕಟ್ಟಬೇಕಿದೆ. 2028ರ ವಿಧಾನಸಭಾ ಚುನಾವಣೆ, ಗ್ರಾಪಂ, ತಾಪಂ, ಜಿಪಂ ಹಾಗೂ ಎಲ್ಲ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಸಬೇಕು. ವಿಧಾನಸಭೆ ಚುನಾವಣೆಗೆ ಮೂರು ವರ್ಷವಿದೆ ಎಂದು ಕಾರ್ಯಕರ್ತರು ಕೈ ಕಟ್ಟಿ ಕೊರದೆ ಎಚ್ಚರಿಕೆಯಿಂದ ಪಕ್ಷ ಸಂಟನೆ ಮಾಡಬೇಕು. ೇತ್ರಕ್ಕೆ 25 ಸಾವಿರ ಸದಸ್ಯತ್ವದ ಗುರಿ ನೀಡಿದ್ದು, ಬೂತ್​ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಬೇಕು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ೇತ್ರದಲ್ಲಿ ಎನ್​ಡಿಎನಿಂದ 19 ಮಂದಿ ಆಯ್ಕೆಯಾಗಿದ್ದಾರೆ. ರಾಜ್ಯದ 224 ವಿಧಾನಸಭಾ ೇತ್ರದ ಪೈಕಿ 151 ವಿಧಾನಸಭಾ ೇತ್ರದಲ್ಲಿ ಎನ್​ಡಿಎ ಮುನ್ನಡೆ ಸಾಧಿಸಿದೆ. ಈ ಫಲಿತಾಂಶ ಮುನ್ನುಡಿಯಾಗಿದ್ದು, 2028ರ ಚುನಾವಣೆಯ ಫಲಿತಾಂಶದ ಚಿತ್ರಣ ಕಣ್ಮುಂದೆ ಇದೆ. ರಾಜ್ಯ ಹಾಗೂ ವಿಧಾನ ೇತ್ರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯಕ್ಕೆ ಅಂತ್ಯ ಹಾಡುವ ದಿನ ದೂರವಿಲ್ಲ. ಕಾಂಗ್ರೆಸ್​ ಸರ್ಕಾರ ಕಿತ್ತು ಎಸೆಯಬೇಕಿದೆ ಎಂದರು.

ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್​ರಾಜು, ಪ್ರಧಾನ ಕಾರ್ಯದರ್ಶಿ ನೆ.ಲ.ಸುರೇಶ್​, ಸೋಂಪುರ ಹೋಬಳಿ ಅದ್ಯಕ್ಷ ಮೋಹನ್​ಕುಮಾರ್​, ಕಸಬಾ ಅಧ್ಯಕ್ಷ ರಮೇಶ್​, ಯುವ ಟಕ ಅಧ್ಯಕ್ಷ ಅಂಜನಮೂರ್ತಿ, ನಗರಸಭೆ ಸದಸ್ಯ ಶಿವಕುಮಾರ್​, ಸುನೀಲ್​ಮೂಡ್​, ಅಂಜಿನಪ್ಪ, ಪುಷ್ಪಲತಾಮಾರೇಗೌಡ, ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ಗುರುಪ್ರಕಾಶ್​, ಬಿ.ಎಂ.ಶ್ರೀನಿವಾಸ್​, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ವೇಣುಗೋಪಾಲ್​, ಚಲುವರಾಜು, ಒಕ್ಕಲಿಗರ ಸಂದ ಅದ್ಯಕ್ಷ ಬಿ.ಕೆ.ತಿಮ್ಮರಾಜು ಉಪಸ್ಥಿತರಿದ್ದರು.

ಸಾರಿಗೆ ನೌಕರರ ಪರ ನಿಲ್ಲಲಿ : ವಿವಿಧ ಬೇಡಿಕೆ ಇಟ್ಟುಕೊಂಡು ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ 4.5 ಲಕ್ಷ ಕೋಟಿ ಬಜೆಟ್​ನಲ್ಲಿ 800ಕೋಟಿ ರೂಪಾಯಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲು ಮೀಸಲಿಡಬೇಕಾಗುತ್ತದೆ. ಅಧಿಕಾರ ಇಲ್ಲದ ವೇಳೆ ಸಾರಿಗೆ ನೌಕರರ ಪರವಾಗಿ ಕಾಂಗ್ರೆಸ್​ ಸರ್ಕಾರ ನಿಂತಿತ್ತು. ಅಧಿಕಾರದಲ್ಲಿ ಇದ್ದ ವೇಳೆ ಒಂದು ವರ್ತನೆ ಹಾಗೂ ವಿರೋಧಪಕ್ಷದಲ್ಲಿ ಇದ್ದ ವೇಳೆ ಮತ್ತೊಂದು ವರ್ತನೆ ಸರಿಯಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಾರಿಗೆ ನೌಕರರ ಪರ ನಿಲ್ಲಲಿ ಎಂದು ನಿಖಿಲ್​ಕುಮಾರಸ್ವಾಮಿ ಸವಾಲು ಹಾಕಿದರು.

ಬೈಕ್​ ಜಾಥಾ : ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಿಖಿಲ್​ ಕುಮಾರಸ್ವಾಮಿ ಅವರು ನಗರದ ವೀವರ್​ ಕಾಲನಿಯಿಂದ ಎಂವಿಎಂ ಕನ್ವೆನ್ಷನ್​ ಹಾಲ್​ವರೆಗೂ ಪಕ್ಷದ ಸಾವಿರಾರು ಕಾರ್ಯಕರ್ತರ ಜತೆ ಬೈಕ್​ ಜಾಥಾ ನಡೆಸಿದರು. ಕಾರ್ಯಕರ್ತರು ನಗರದಲ್ಲಿ ಹಾಗೂ ಹೆದ್ದಾರಿಯಲ್ಲಿ ಪಕ್ಷದ ಬಾವುಟ ಹಿಡಿದು, ಜೈಕಾರ ಕೂಗುತ್ತಾ ಬೈಕ್​ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಸ್​ ನಿಲ್ದಾಣ ಬಳಿ ಕ್ರೇನ್​ ಮೂಲಕ ಬೃಹತ್​ ಗ್ರಾಮದ ಹೂವಿನ ಹಾರ ಹಾಕಿ ಜೆಡಿಎಸ್​ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು. ಜೆಡಿಎಸ್​ ತಾಲೂಕು ವಕ್ತಾರರಾಗಿ ವಕೀಲ ಜಿ.ಎನ್​.ಕನಕರಾಜು ಹಾಗೂ ಯುವ ಟಕದ ನಗರದ ಅಧ್ಯಕ್ಷ ಕೆಂಪಲಿಂಗಹಳ್ಳಿವಿಷ್ಣು ಅವರನ್ನು ನೇಮಕ ಮಾಡಲಾಯಿತು.

ಜೆಡಿಎಸ್​ ಜನಪರ : ರಾಜ್ಯದಲ್ಲಿ ಕುಮಾರಣ್ಣ ಎರಡು ಸಲ ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರೂ ಅವರ ಸಾಧನೆಗಳು ಇಂದಿಗೂ ಜನಮಾನಸದಲ್ಲಿವೆ. ಜತೆಗೆ ಮಾಜಿ ಪ್ರಧಾನಿ ದೇವೇಗೌಡರು ಉತ್ತಮ ಆಡಳಿತ ನೀಡಿದ್ದಾರೆ. ಜೆಡಿಎಸ್​ ಎಂದಿಗೂ ಜನಪರವಾಗಿರಲಿದೆ ಎಂದು ನಿಖಿಲ್​ಕುಮಾರಸ್ವಾಮಿ ಹೇಳಿದರು.

ವೃಷಭಾವತಿ ಯೋಜನೆ ಕೈ ಬಿಡಿ : ಚರಂಡಿ ನೀರನ್ನು ಶುದ್ಧೀಕರಣ ಮಾಡುವ ವ್ಯವಸ್ಥೆ ಬಹುಶ@ ವಿಶ್ವದಲ್ಲೇ ಕಂಡಿಲ್ಲ. ಸುಮಾರು 1800 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್​ಲೈನ್​ನಲ್ಲಿ ದಾಖಲೆ ಮಟ್ಟದ ಪರ್ಸೆಂಟೇಜ್​ ತಗೊಳೋಕೆ ಸರ್ಕಾರ ಮುಂದಾಗಿದೆ. ಅವರ ಜೇಬು ತುಂಬಿಸಿಕೊಳ್ಳಲು ಬೆಂಗಳೂರಿನ ತ್ಯಾಜ್ಯ ನೀರನ್ನು ಕೆರೆಗೆ ತುಂಬಿಸಲು ಮುಂದಾಗಿದ್ದಾರೆ. ವೃಷಭಾವತಿ ಯೋಜನೆ ಕೈಬಿಡದಿದ್ದರೆ ಹೋರಾಟ ಮಾಡಲಾಗುವುದು ಎಂದು ನಿಖಿಲ್​ ಎಚ್ಚರಿಸಿದರು.

ಡಿಕೆಶಿ ಪ್ರಾದೇಶಿಕ ಪಕ್ಷ ಕಟ್ಟಲಿ : ರಾಜ್ಯದಲ್ಲಿ ಜೆಡಿಎಸ್​ ಅತ್ಯಂತ ಗಟ್ಟಿಯಾಗಿದೆ. ಪಕ್ಷದ ಬಗ್ಗೆ ಲುವಾಗಿ ಮಾತನಾಡುವ ಡಿ.ಕೆ.ಶಿವಕುಮಾರ್​ ಪ್ರಾದೇಶಿಕ ಪಕ್ಷ ಕಟ್ಟಿ ರಾಜ್ಯದಲ್ಲಿ ಕೇವಲ 6 ಸೀಟು ಗೆಲ್ಲಲಿ, ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿದ್ದಾರೆ. ಜತೆಗೆ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಎಸ್​ಐಟಿ ಎಂದರೇ ಅದು ಶಿವಕುಮಾರ್​ ಇನ್ವೆಸ್ಟ್​ಕೇಷನ್​ ಟೀಮ್​ ಆಗಿದೆ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್​ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net