ಜಿಬಿಎಸ್​ ಉತ್ಸವದಲ್ಲಿ ಕೆಎಲ್​ಇ ಬಿಬಿಎ ಸಾಧನೆ

IMG_20250504_211956_554.jpg
Published on

ಹುಬ್ಬಳ್ಳಿ: ಇಲ್ಲಿಯ ಗ್ಲೋಬಲ್ ಬಿಜಿನೆಸ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಜಿಬಿಎಸ್ ಉತ್ಸವದಲ್ಲಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿಸ್ ಆ್ಯಂಡ್ ರೀಸರ್ಚ್ ವಿದ್ಯಾರ್ಥಿಗಳು ಜನರಲ್ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದ್ದಾರೆ.

ಎರಡು ದಿನಗಳ ರಾಜ್ಯ ಮಟ್ಟದ ನಿರ್ವಹಣಾ ಉತ್ಸವದಲ್ಲಿ ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಪೋರೇಟ್ ಐಡಲ್, ಸ್ಟಾರ್ಟ್ಅಪ್ ಪ್ಲಾನ್, ಐಸ್ ಬ್ರೇಕರ್ ಹಾಗೂ ದಿ ಹಂಕ್ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರತೆ, ಆತ್ಮವಿಶ್ವಾಸ ಮತ್ತು ನಾವೀನ್ಯತೆಯ ಮೂಲಕ ಭಾಗವಹಿಸಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಬಿಬಿಎ ಕಾರ್ಯಕ್ರಮ ಸಂಯೋಜಕಿ ಡಾ. ಸುವರ್ಣ ನಿಂಬಗಲ್ ತಿಳಿಸಿದರು.

ಮೇಘಾ, ಸಿದ್ಧಾಂತ ರೊಳ್ಳಿ, ಮಹಾಂತೇಶಗೌಡ, ಸೀತಾರಾಮ, ಅದ್ವೆತ್ ಹುಕ್ಕೇರಿ, ಶ್ರೀನಿಧಿ ವಿ.ಜೆ, ಶ್ರೇಷ್ಠ ಗೌಡ, ಇತರರ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net