ಜಿಬಿ-ಕೀರ್ತಿ ನೆನಪು ನಾಳೆ

1b3faa57-bc9c-44ce-a2e8-0c86fe93524a
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಭಿನಯ ಭಾರತಿಯ ಮಾಸಿಕ ದತ್ತಿ ಉಪನ್ಯಾಸ ನಿಮಿತ್ತ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ಸಹಯೋಗದಲ್ಲಿ ಜು. 29ರಂದು ಸಂಜೆ 6 ಗಂಟೆಗೆ ಮನೋಹರ ಗ್ರಂಥ ಮಾಲಾದಲ್ಲಿ ಜಿಬಿ-ಕೀರ್ತಿ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿ.ಬಿ ಜೋಶಿ ಜನ್ಮದಿನ ಹಾಗೂ ಕೀರ್ತಿನಥ ಕುರ್ತಕೋಟಿ ಪುಣ್ಯತಿಥಿ ಸ್ಮರಣಾರ್ಥ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಜಿಬಿ-ಕೀರ್ತಿ ಆತ್ಮೀಯ ವಲಯದ ಹರ್ಷ ಡಂಬಳ, ಆನಂದ ಝುಂಜರವಾಡ, ಪ್ರಕಾಶ ಗರುಡ, ಶಶಿಧರ ನರೇಂದ್ರ, ಕೃಷ್ಣ ಕಟ್ಟಿ, ಇತರರು ಮಾತನಾಡಲಿದ್ದಾರೆ ಎಂದು ಸಂಚಾಲಕ ಸಮೀರ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net