ಕಿದ್ವಾಯಿ ಅಪ್ಡೇಟ್​ ಮಾಡಲು ಶಿಾರಸ್ಸು

1009KLB02
Published on

ಕಲಬುರಗಿ: ನಗರದಲ್ಲಿ ಸ್ಥಾಪನೆ ಆಗಿರುವ ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದು ಸರ್ಕಾರ ಭರವಸೆ ನೀಡಿದ್ದರೂ ಹಲವು ವರ್ಷದಿಂದ ಸೌಲಭ್ಯ ಕಲ್ಪಿಸದೇ ಸಮಸ್ಯೆ ಆಗುತ್ತಿದ್ದು, ಅದನ್ನು ಪರಿಶೀಲನೆ ನಡೆಸಿದ್ದು, ಅಪ್ಡೇಟ್​ ಮಾಡುವಂತೆ ಸರ್ಕಾರಕ್ಕೆ ವಿಧಾನ ಪರಿಷತ್​ ಭರವಸೆ ಸಮಿತಿಯಿಂದ ಶಿಾರಸು ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ, ಎಂಎಲ್​ಸಿ ಟಿ.ಎ.ಶರವಣ ಹೇಳಿದರು.

ಭರವಸೆ ಸಮಿತಿಯಿಂದ ಕಿದ್ವಾಯಿ ಕ್ಯಾನ್ಸರ್​ ಆಸ್ಪತ್ರೆ, ರಾಯಚೂರಿನ ಹಟ್ಟಿ ಗಣಿಯಲ್ಲಿ ಸೌಲಭ್ಯಗಳ ಕುರಿತು ಪರಿಶೀಲನೆಗೆ ಭರವಸೆ ಸಮಿತಿ ಪ್ರವಾಸ ಹಮ್ಮಿಕೊಂಡಿದ್ದು, ಕಲಬುರಗಿ ನಗರದ ಕಿದ್ವಾಯಿ ಆಸ್ಪತ್ರೆಗೆ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ. ಈ ಭಾಗದ ಕ್ಯಾನ್ಸರ್​ ರೋಗಿಗಳಿಗೆ ಸೂಕ್ತ ಕಟ್ಟಡ, 210 ಬೆಡ್​ಗಳ ಆಸ್ಪತ್ರೆ, ವೈದ್ಯರು, ಲ್ಯಾಬ್​ಗಳ ನಿರ್ಮಾಣ ಸೇರಿ ಹಲವು ಸಮಸ್ಯೆಗಳು ಭೇಟಿ ವೇಳೆ ಗಮನಕ್ಕೆ ಬಂದಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2021ರಲ್ಲಿಯೇ ಸರ್ಕಾರ ಕಲಬುರಗಿಯ ಕಿದ್ವಾಯಿ ೆರಿೆರಲ್​ ಕ್ಯಾನ್ಸರ್​ ಕೇಂದ್ರಕ್ಕೆ ಎಲ್ಲ ಸೌಲಭ್ಯ ಒದಗಿಸುವ ಭರವಸೆ ನೀಡಿತ್ತು. 14 ವೈದ್ಯರು ಇರಬೇಕಿತ್ತು. 10 ಮಾತ್ರ ಇದ್ದು, ಅದರಲ್ಲೂ ನಾಲ್ವರು ಖಾಯಂ ವೈದ್ಯರು, ಆರು ವೈದ್ಯರು ಗುತ್ತಿಗೆ ಆಧಾರದಲ್ಲಿದ್ದು, ನಾಲ್ಕು ವೈದ್ಯರ ಹುದ್ದೆ, ಸಿಬ್ಬಂದಿ, ಲ್ಯಾಬ್​ ಸಿಬ್ಬಂದಿ ಸೇರಿ ವಿವಿಧ ಹುದ್ದೆ ಖಾಲಿ ಇವೆ. ವೇತನ ಸೇರಿ ಇತರೆ ಸೌಲಭ್ಯ ಕೊರತೆ ಗಮನಕ್ಕೆ ಬಂದಿದ್ದು, ಎಲ್ಲ ವಿಷಯಗಳನ್ನು ಬಗೆಹರಿಸಲು ಸರ್ಕಾರಕ್ಕೆ ಶಿಾರಸು ಮಾಡಲಾಗುವುದು ಎಂದು ತಿಳಿಸಿದರು.

24 ತಿಂಗಳಲ್ಲಿ ಪೂರ್ಣಕ್ಕೆ ಶಿಾರಸ್ಸು: ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಅಂಗ ಸಂಸ್ಥೆಯಾದ ಕಲಬುರಗಿಯ ೆರಿೆರಲ್​ ಕ್ಯಾನ್ಸರ್​ ಕೇಂದ್ರವೂ 1989ರಲ್ಲಿ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕದ ಏಕೈಕ ಸರ್ಕಾರಿ ಕ್ಯಾನ್ಸರ್​ ಚಿಕಿತ್ಸಾ ಕೇಂದ್ರವಾಗಿದೆ. ಇದಕ್ಕೆ ಎಲ್ಲ ಸೌಲಭ್ಯ ಒದಗಿಸಿ, 210 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುತ್ತಿದ್ದು, 24 ತಿಂಗಳಲ್ಲಿ ಹೊಸ ಕಟ್ಟಡ, ಸಿಬ್ಬಂದಿ, ವೈದ್ಯರ ನೇಮಕ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಿಾರಸ್ಸು ಮಾಡಲಾಗುವುದು. ಆಸ್ಪತ್ರೆಯವರು ತಮ್ಮ ಕೊರತೆ, ಬೇಡಿಕೆಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ನೀಡಲು ಸೂಚಿಸಲಾಗಿದೆ ಎಂದರು.

ಸಮಿತಿಗೆ ಸೀಮಿತ ವ್ಯಾಪ್ತಿ ಇದ್ದು, ಮುಂದಿನ ದಿನಗಳಲ್ಲಿ ನೀರಾವರಿ, ತೊಗರಿ ಸೇರಿ ಈ ಭಾಗದ ಹೆಚ್ಚಿನ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಮಿತಿ ಸದಸ್ಯರು, ಪರಿಷತ್​ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಪ್ರತಾಪಸಿಂಹ ನಾಯಕ, ಮಂಜುನಾಥ ಮಂಡಾರಿ, ಕೆ.ಎಸ್​.ನವೀನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net