ಗವಾಯಿ ಸ್ಮರಣಾರ್ಥ ವಚನ ಸಂಗೀತೋತ್ಸವ

17 - Copy
Published on

ಮೈಸೂರು: ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಸ್ಮರಣಾರ್ಥ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ‘ವಚನ ಸಂಗೀತೋತ್ಸವ’ ನೆರವೇರಿತು.


ಗಾನಭಾರತಿ ಸಹಯೋಗದಲ್ಲಿ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತ ಕಲಾವಿದ ಪ್ರೊ.ಎಸ್.ಮಲ್ಲಣ್ಣ ಮತ್ತು ಸಪ್ತಸ್ವರ ಬಳಗದ ಗಾಯಕಿ ವಿದುಷಿ ಗೀತಾ ಹೆಬ್ಬಾರ್ ‘ವಚನ ಸಂಗೀತ’ ಕಾರ್ಯಕ್ರಮ ನೀಡಿದರು.

ಪ್ರೊ.ಎಸ್. ಮಲ್ಲಣ್ಣ ಅವರಿಗೆ ಪಕ್ಕವಾದ್ಯದಲ್ಲಿ ಎ.ಎನ್.ಪ್ರಸನ್ನ (ಆರ್ಗನ್), ಕಿರಣ್‌ಕುಮಾರ್(ತಬಲ) ಹಾಗೂ ವಿನ್ಸೆಂಟ್(ರಿದಂ ಪ್ಯಾಡ್) ಸಹಕಾರ ನೀಡಿದರು. ಗೀತಾ ಹೆಬ್ಬಾರ್ ಅವರಿಗೆ ಪಕ್ಕವಾದ್ಯದಲ್ಲಿ ಪಂ.ಭೀಮಾಶಂಕರ ಬಿದನೂರ (ಹಾರ್ಮೋನಿಯಂ), ಮೃತ್ಯುಂಜಯ ಹಿರೇಮಠ (ತಬಲ) ಸಾಥ್ ನೀಡಿದರು.


ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದತ್ತಿ ದಾನಿಗಳಾದ ಮಂಗಳ ಮುದ್ದುಮಾದಪ್ಪ, ಗಾನಭಾರತಿ ಅಧ್ಯಕ್ಷೆ ರಮಾ ಬೆಣ್ಣೂರು, ಪರಿಷತ್ ಅಧ್ಯಕ್ಷ ಮ.ಗು.ಸದಾನಂದಯ್ಯ, ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net