ವಿವಿ ಅಂಕಪಟ್ಟಿಯಲ್ಲಿ ಗವಿಶ್ರೀ ಭಾವಚಿತ್ರ

Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಭಾವಚಿತ್ರ ಬದಲಾಗಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರ ಮುದ್ರಿಸಿ ಎಡವಟ್ಟು ಮಾಡಿಕೊಂಡಿದೆ.

ಕೊಪ್ಪಳದ ಶ್ರೀಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ 2022 -23ನೇ ಸಾಲಿನಲ್ಲಿ ಪ್ರಥಮ ಬಿಎಸ್‌ಸಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ದೇವರಾಜ್ ಬಸವರಾಜ ಮೂಲಿಮನಿ ಪದವಿ ಪೂರ್ಣಗೊಳಿಸಿದ್ದಾನೆ. ವಿವಿಯೂ ವಿದ್ಯಾರ್ಥಿಗೆ ಒಂದ ರಿಂದ ನಾಲ್ಕನೇ ಸೆಮಿಸ್ಟರ್ ಅಂಕಪಟ್ಟಿಗಳನ್ನು ಈಗ ಕೊಟ್ಟಿದ್ದು, ಅದರಲ್ಲಿ ಗವಿಶ್ರೀ ಭಾವಚಿತ್ರ ಪ್ರಕಟವಾಗಿದೆ. ಐದು ಮತ್ತು ಆರನೇ ಸೆಮಿಸ್ಟರ್ ಅಂಕಪಟ್ಟಿಗಳು ಬರುವುದು ಬಾಕಿಯಿದೆ. ವಿದ್ಯಾರ್ಥಿ ಈಗ ಅಂಕಪಟ್ಟಿಯಲ್ಲಿನ ಭಾವಚಿತ್ರ ಬದಲಾಯಿಸುವಂತೆ ಕೊಪ್ಪಳ ಕಾಲೇಜಿನ ಪ್ರಾಚಾರ್ಯರು ವಿವಿಗೆ ಅರ್ಜಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net