ಗವಿಸಿದ್ಧ ರಚಿಸಿದ ಕೃತಿಗಳು ಕವಿಗಳಿಗೆ ಸ್ಪೂರ್ತಿ

kpl
ಕೊಪ್ಪಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಗವಿಸಿದ್ಧ ಎನ್.ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ತಜ್ಞ ಟಿ.ವಿ.ಮಾಗಳದ, ಸಾಹಿತಿಗಳಾದ ಪ್ರಕಾಶ ಕಡಮೆ, ಎ.ಎಂ.ಮದರಿ, ಎಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಮುಖಂಡ ಬಸವರಾಜ ಬಳ್ಳೊಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಇದ್ದರು.
Published on

ಕೊಪ್ಪಳ: ಸಾಹಿತ್ಯಕ್ಕೆ ಸೋತ ಮನಸ್ಸುಗಳಿಗೆ ಆತ್ಮಸ್ಥೈರ್ಯ ತುಂಬುವ ಅಗಾದ ಶಕ್ತಿ ಇದೆ ಎಂದು ಶಿಕ್ಷಣ ತಜ್ಞ ಟಿ.ವಿ.ಮಾಗಳದ ಹೇಳಿದರು.


ತಾಲೂಕಿನ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಗವಿಸಿದ್ಧ ಎನ್.ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕವಿ ಗವಿಸಿದ್ಧ ಸಶಕ್ತ ಅಭಿವ್ಯಕ್ತಿಯ ಸಾತ್ವಿಕ ರೋಷದ ಕವಿಯಾಗಿದ್ದಾರೆ. ಅವರು ಮಣ್ಣು ಅಪ್ಪಿಕೊಂಡು 20 ವಷರ್ಗಳಾದರೂ ಕೃತಿಗಳ ಮೂಲಕ ನಮ್ಮೊಂದಿಗೆ ಇದ್ದಾರೆ. 12 ಶತಮಾನದ ಶರಣ ಸಾಹಿತ್ಯ ಬೋಧಿಸಿದ್ದು ಸಮಾನತೆ, ಸಮ ಸಮಾಜದ ಆಶಯವಾಗಿದೆ ಎಂದರು.


ಡಾ. ವಿಕ್ರಮ ವಿಸಾಜಿ ಮಾತನಾಡಿ, ಗವಿಸಿದ್ಧ ಬಳ್ಳಾರಿ ಸಮಾಜದ ಎಲ್ಲ ಸಂಕಷ್ಟಗಳಿಗೆ ತಳಮಳಗೊಂಡು ಕಾವ್ಯ ರಚಿಸಿದರು. ಉತ್ತಮ ಸಾಹಿತಿಗಳ ಒಡನಾಟದಿಂದ ಬಂಡಾಯ ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾವ್ಯ ವ್ಯಕ್ತಿತ್ವ ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಿದರು.


ಸಾಹಿತ್ಯೋತ್ಸವದಲ್ಲಿ ವಿವಿಧ ಸಾಹಿತಿಗಳ ಎಂಟು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಮೂವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ, ಆರು ಸಾಧಕರಿಗೆ ಸಮಾಜಮುಖಿ ಗೌರವ ನೀಡಲಾಯಿತು.

ಮೆಹಬೂಬ ಕಿಲ್ಲೆದಾರ, ಮರಿಯಪ್ಪ ಚಾಮಲಾಪುರ, ಟಿ.ಆರ್.ಬೆಲ್ಲದ , ಅನ್ನಪೂರ್ಣ ಮನ್ನಾಪುರ ಗೀತಗಾಯನ ನಡೆಸಿಕೊಟ್ಟರು. ಸಾಹಿತಿಗಳಾದ ಪ್ರಕಾಶ ಕಡಮೆ, ಎ.ಎಂ.ಮದರಿ, ಎಚ್.ಎಸ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಮಹೇಶ ಬಳ್ಳಾರಿ, ಎ.ವಿ.ಕಣವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net