ಪುಸ್ತಕ ಬಿಡುಗಡೆಗೊಳಿಸಿದ ಗವಿಶ್ರೀ

gavishree koppal gavimath book release
Published on

ಕೊಪ್ಪಳ: ನಗರದ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ 1989&90 ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಳಗದಿಂದ ಅ.20ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಗವಾಗಿ ಗುರುವಾರ ಗವಿಶ್ರೀ, ವಿದ್ಯಾರ್ಥಿಗಳು&ಶಿಕ್ಷಕರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ಅಕ್ಷರ ಕಲಿಸಿದ ಗುರುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದು ಉತ್ತಮ ಕೆಲಸ. ಇದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಇಂಥ ಕಾರ್ಯಕ್ರಮಗಳ ಮೂಲಕ ಗುರುಗಳಿಗೆ ಸೂಕ್ತ ಗೌರವ ಸಲ್ಲುತ್ತದೆ. ಇಂಥ ಕಾರ್ಯಕ್ಮರಗಳ ಸಂಖ್ಯೆ ಹೆಚ್ಚಲಿ ಎಂದರು. ಮಾಹಿತಿ ಪುಸ್ತಕ ಹಾಗೂ ಆಮಂತ್ರಣ ಪತ್ರಿಕೆ ಬಿಡುಗೆಗೊಳಿಸಿದರು.

ವಿದ್ಯಾರ್ಥಿ ಬಳಗದ ಕಲ್ಲನಗೌಡ ದೊಡ್ಡಮನಿ, ಹೇಮಣ್ಣ ತುಪ್ಪದ, ಹನುಮಂತಪ್ಪ ಮ್ಯಾಗಳಮನಿ, ಅಜ್ಜಯ್ಯ ಹಿರೇಮಠ, ಸತ್ಯನಾರಾಯಣ ಕುಲಕರ್ಣಿ, ವಿಜಯಕುಮಾರ ಮಂಗಳೂರು, ಗಂಗಾಧರ ಕೇಸರಿಮಠ, ಶರಣಪ್ಪ ಸಜ್ಜನ್​, ಶಿವಕುಮಾರ ಸಂಡೂರು, ಬಿ.ಪ್ರಸಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net