ಬಿಎಸ್ಪಿಎಲ್ ಕಾರ್ಖಾನೆ ವಿರೋಧಿಸಿ ಕೊಪ್ಪಳ ಬಂದ್; ಪ್ರತಿಭಟನೆಯಲ್ಲಿ ಕಣ್ಣೀರು ಹಾಕಿದ ಗವಿಶ್ರೀಗಳು

GaviShree
Published on

ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆ ಆರಂಭ ವಿರೋಧಸಿ ವಿವಿಧ ಸಂಘಟನೆಗಳು ಕೊಪ್ಪಳ ಬಂದ್​ಗೆ ಕರೆ ನೀಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಆಟೋ ಸೇರಿ ಖಾಸಗಿ ವಾಹನಗಳ ಸಂಚಾರವೂ ಇಲ್ಲದಂತಾಗಿದೆ. ಪೆಟ್ರೋಲ್ ಬಂಕ್​ಗಳನ್ನು ಕೂಡ ಬಂದ್ ಮಾಡಲಾಗಿದ್ದು, ಮೆಡಿಕಲ್ ಶಾಪ್​ಗಳ ತೆರೆದಿವೆ.

ಗವಿಮಠದಿಂದ ಪ್ರತಿಭಟನಾ ಜಾಥಾದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಕವಿಗಳು ಕಾರ್ಖಾನೆ ವಿರುದ್ಧ ಬರೆದ ಕವನ ವಾಚಿಸಿ ಗಮನ ಸೆಳೆದರು. ಪ್ರತಿಭಟನೆಯ ವೇಳೆ ಗವಿಶ್ರೀಗಳು ಕಾರ್ಖಾನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ವಿಡಿಯೋ ತುಣುಕು ಕಂಡು ಕಣ್ಣೀರು ಹಾಕಿದ್ದಾರೆ.

ಕೊಪ್ಪಳ ತಾಲ್ಲೂಕಿನ ಬಗನಾಳ, ಕಾಸನಕಂಡಿ, ಹಾಲವರ್ತಿ ಇನ್ನಿತರ ಗ್ರಾಮಗಳಲ್ಲಿ ಜನರು ಅನುಭವಿಸುವ ವಿಡಿಯೋ ತುಣುಕು ರಚಿಸಲಾಗಿದೆ. ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆಯಿಂದ ವಿಡಿಯೋ ರಚಿಸಿದ್ದು, ಮಕ್ಕಳು, ಮಹಿಳೆ, ರೈತರು ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಮನಮಿಡಿಯುವಂತೆ ಮಾತನಾಡಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಭಾಗಿಯಾದವರಿಗೆ ವಿಡಿಯೋ ಪ್ರದರ್ಶಿಸಿದ್ದು, ವೀಕ್ಷಿಸುವಾಗ ಗವಿಶ್ರೀಗಳು ಭಾವುಕರಾದರು. ಕಣ್ಣೀರು ಹಾಕಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net