ವಸತಿ ನಿಲಯಕ್ಕೆ 10 ಲಕ್ಷ ರೂ. ದೇಣಿಗೆ

IMG-20220728-WA0006.jpg
Published on

ಕೊಪ್ಪಳ: ನಗರದ ಗವಿಮಠದ 5 ಸಾವಿರ ವಿದ್ಯಾರ್ಥಿಗಳ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡ ಕಾಮಗಾರಿಗೆ ಜಿಲ್ಲೆಯ 248 ಹಾಲು ಉತ್ಪಾದಕ ಸಂಘಗಳಿಂದ ರಾಬಕೊವಿ ನಿರ್ದೇಶಕ ವೆಂಕನಗೌಡ ಹಿರೇಗೌಡರ್ ನೇತೃತ್ವದಲ್ಲಿ ಗುರುವಾರ 10,10,005ರೂ. ದೇಣಿಗೆ ಚೆಕ್‌ನ್ನು ಗವಿಶ್ರೀಗಳಿಗೆ ನೀಡಲಾಯಿತು.

ಸಂಘಗಳ ದಾನ-ಧರ್ಮ ನಿಧಿಯಿಂದ ಮೊತ್ತ ಸಂಗ್ರಹಿಸಲಾಗಿದೆ. ಕೊಪ್ಪಳ ತಾಲೂಕಿನ ಸಂಘಗಳು 3,30,100ರೂ., ಯಲಬುರ್ಗಾ 2,51,000ರೂ., ಗಂಗಾವತಿ 2,20,000ರೂ., ಕುಷ್ಟಗಿ 2,05,905ರೂ.ನೀಡಿವೆ. ಶ್ರೀಗಳು ಬಡ ಮಕ್ಕಳ ಶಿಕ್ಷಣಕ್ಕಾಗಿ ಸಂಕಲ್ಪ ಮಾಡಿದ್ದಾರೆ. ಅವರಿಗೆ ರಾಬಕೊವಿಯಿಂದ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ವೆಂಕನಗೌಡ ತಿಳಿಸಿದರು.

ಬಳಿಕ ಗವಿಶ್ರೀಗಳ ಆಶೀರ್ವಾದ ಪಡೆದು ಪ್ರಸಾದ ಸೇವಿಸಿದರು. ರಾಬಕೊವಿ ನಿರ್ದೇಶಕರಾದ ಎಂ.ಸತ್ಯನಾರಾಯಣ, ಶಿವಪ್ಪ ವಾದಿ, ಕವಿತಾ ಗುಳಗಣ್ಣನವರ್, ವಿಶ್ವನಾಥ ಹಿರೇಮಠ, ಎ.ಐ. ಪಡಸಲಗಿ, ಬಸವರಾಜ, ಖಾಸಿಂಸಾಬ ಬೆಟಗೇರಿ, ರತ್ನಮ್ಮ ಹಕ್ಕಂಡಿ, ಸೋಮಶೇಖರ್ ಗುರಿಕಾರ, ನಾರಾಯಣ ಅಂಗಡಿ ಸೇರಿ ವಿವಿಧ ಹಾಲು ಉತ್ಪಾದಕ ಸಹಕಾರಿ ಸಂಘಗಳ ಪದಾಧಿಕಾರಿಗಳಿದ್ದರು.

ಗವಿಶ್ರೀಗಳು ಬಡ ಮಕ್ಕಳ ಶಿಕ್ಷಣಕ್ಕಾಗಿ ಸಂಕಲ್ಪ ಮಾಡಿದ್ದಾರೆ. ಮಹತ್ತರ ಕಾರಣಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ. ಜಿಲ್ಲೆಯ ಎಲ್ಲ ಹಾಲು ಉತ್ಪಾದಕ ಸಂಘಗಳಿಂದ ಹಣ ಸಂಗ್ರಹಿಸಿ ಮಠಕ್ಕೆ ಅರ್ಪಿಸಿದ್ದೇವೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.-ಜಗದೀಶ ಚಟ್ಟಿ. ಬಿನ್ನಾಳ ಹಾಲು ಉತ್ಪಾದಕ ಸಂಘದ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net