ಗೌತಮ ಬುದ್ಧರ ಆದರ್ಶ ಪಾಲಿಸಿ

Gautama Buddha's ideal policy
ತಾಳಿಕೋಟೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಗವಾನ ಗೌತಮ ಬದ್ಧರ ಜಯಂತಿ ನಡೆಯಿತು. ತಹಸೀಲ್ದಾರ್ ಡಾ. ವಿನಯಾ ಹೂಗಾರ, ದಲಿತ ಮುಖಂಡ ಮಹೇಶ ಚಲವಾದಿ, ಮುಖಂಡ ಬಸವರಾಜ ಕಟ್ಟಿಮನಿ ಇತರರಿದ್ದರು.
Published on

ತಾಳಿಕೋಟೆ: ಗೌತಮ ಬುದ್ಧರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಅವರ ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದು ದಲಿತ ಮುಖಂಡ ಮಹೇಶ ಚಲವಾದಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಭಗವಾನ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೌದ್ಧ ಧರ್ಮ ಹುಟ್ಟು ಹಾಕುವ ಜತೆಗೆ ಧರ್ಮ ಪಾಲನೆಯೊಂದಿಗೆ ಸಾಗಿದ ಗೌತಮ ಬುದ್ಧರು ಹುಟ್ಟು ಸಾವಿನ ನಡುವೆ ಮಾಡುವ ಒಳ್ಳೆಯ ಕಾರ್ಯಗಳು ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂಬ ಸಂದೇಶ ಸಾರಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಡಾ. ವಿನಯಾ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಸವರಾಜ ಕಟ್ಟಿಮನಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಮುಖಂಡರಾದ ಅಶೋಕ ಪಡೇಕನೂರ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ಸಿದ್ದಪ್ಪ ಹೊಸಮನಿ, ಶಾಂತಪ್ಪ ಕೊಡಗಾನೂರ, ಬಸವರಾಜ ತಳವಾರ, ಸಂಜೀವಕುಮಾರ ಕಟ್ಟಿಮನಿ, ಸಿದ್ದಪ್ಪ ಬಸರಿಕಟ್ಟಿ, ಕಾಶಿನಾಥ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ವಿವಿಧ ಇಲಾಖಾ ಅಧಿಕಾರಿ ವರ್ಗದವರು ಇದ್ದರು. ಸಿಆರ್‌ಸಿ ರಾಜು ವಿಜಾಪುರ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net