

ಬೆಂಗಳೂರು:ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ, ಶಾಂತಿಯ ಸಂದೇಶ ಸಾರಿದ ಗೌತಮ ಬುದ್ಧ ಅದ್ಭತ ಮನೋವಿಜ್ಞಾನಿ ಆಗಿದ್ದವರು ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸತ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರ 70ನೇ ಜನ್ಮ ದಿನ ಪ್ರಯುಕ್ತ ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ, ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
2,500 ವರ್ಷಗಳ ಹಿಂದೆಯೇ ಬುದ್ಧ, ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿಹೇಳಿ ಜಗತ್ತಿಗೆ ಗುರುವಾದವರು. ಬುದ್ಧನ ಆದರ್ಶಗಳು, ಪ್ರೇರಕ ಶಕ್ತಿಯಾಗಿದ್ದವು ಎಂದರು.
ಮೂಡ್ನಾಕೂಡು ಚಿನ್ನಸ್ವಾಮಿ ಬರೆದಿರುವ "ಧಮ್ಮಯಾನ-ಬೌದ್ಧ ತತ್ವ ಮೀಮಾಂಸೆ' ಪುಸ್ತಕದಲ್ಲಿ ಬುದ್ಧನ ಜ್ಞಾನೋದಯ ಬಗೆಗಿನ ವಿಧಾನಗಳನ್ನು ವಿವರಿಸಲಾಗಿದೆ. ಬುದ್ಧನ ಜೀವನದಲ್ಲಿ ನಡೆದ ಘಟನಾವಳಿಯ ಕುರಿತು ಅಂಶಗಳಿವೆ. ಪರಿಪೂರ್ಣ ಸಂಭಾವಿತ ವ್ಯಕ್ತಿಯಲ್ಲಿ ಬುದ್ಧನನ್ನು ಕಾಣಬಹುದು. ಈಗಿನ ಕಾಲಟ್ಟದಲ್ಲಿ ಸಾವನ್ನು ಹೊಸದೃಷ್ಟಿಯಿಂದ ನೋಡಲಾಗುತ್ತಿದೆ. ಅನೇಕ ದೃಷ್ಟಿಗಳಿಂದ ಈ ಪುಸ್ತಕ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಅಗ್ರಹಾರ ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
"ಆ ಮಹಾ ಮುಗುಳುನಗೆ-ಕಾವ್ಯ', "ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ&ಮೂ.ಚಿ.ಸಾಹಿತ್ಯ ವಿಮರ್ಶೆ' ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಬಾಲು ತಂಡದಿಂದ ನಡೆಸಿಕೊಟ್ಟ ಜಂಬೆ ಝಲಕ್ ನೋಡುಗರ ಗಮನ ಸೆಳೆಯಿತು. ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಕರ್ನಾಟಕ ಲೇಖಕಿಯರ ಸಂದ ಅಧ್ಯೆ ಡಾ.ಎಚ್.ಎಲ್.ಪುಷ್ಪ ಮಾತನಾಡಿದರು. ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ, ಲೇಖಕ ಚ.ಹ.ರಘುನಾಥ ಸೇರಿ ಮತ್ತಿತರರಿದ್ದರು.