

ಬಾಳೆಹೊನ್ನೂರು: ಮೆಣಸುಕೊಡಿಗೆಯ ಗೌರಿಕೆರೆ ಕೆರೆ ಚೌಡೇಶ್ವರಿ ಅಮ್ಮನವರ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನಡೆಯಿತು. ದೀಪೋತ್ಸವದ ಅಂಗವಾಗಿ ಚೌಡೇಶ್ವರಿ ದೇವಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಕುಂಕುಮಾರ್ಚನೆ, ಪುಷ್ಪಾಲಂಕಾರ, ಫಲ ಸಮರ್ಪಣೆ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಭಕ್ತರು ದೇವಾಲಯದ ಸುತ್ತಲೂ ನೂರಾರು ಹಣತೆಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ಆಕರ್ಷಕ ಪಟಾಕಿ ಪ್ರದರ್ಶನ, ಹಲಗೆ ಓಲದ ವಾದ್ಯಗೋಷ್ಠಿ ವಿಶೇಷ ನೆರವೇರಿತು. ದೇವಾಲಯ ಸಮಿತಿ ಪ್ರಮುಖರಾದ ಟಿ.ಎಂ.ಗುರುಮೂರ್ತಿಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಕಾಫಿ ಬೆಳೆಗಾರ ಎಂ.ಆರ್.ಬಾಲಕೃಷ್ಣ, ಪ್ರಮುಖರಾದ ಗೋಪಾಲ ಆಚಾರ್ಯ, ಸುಬ್ರಮಣ್ಯ ಕುಂಬತ್ತಿ, ಮಂಜೇಶ್ ಕೋಟೇಹಕ್ಲು, ಮಂಜಪ್ಪನಾಯ್ಕ, ಯೋಗೀಶ್ ಆಚಾರ್ಯ, ಪ್ರಸನ್ನ ಆಚಾರ್ಯ, ಶಂಕರ, ಪ್ರವೀಣ ಮತ್ತಿತರರು ಇದ್ದರು.