

ಬಸವನಬಾಗೇವಾಡಿ: ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ಗೌರಿಶಂಕರ ಜಾತ್ರಾಮಹೋತ್ಸವ ನಿಮಿತ್ತ ವಿವಿಧ ಸಾಂಸತಿ, ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ನ.17 ರಂದು ರಸಮಂಜರಿ ಕಾರ್ಯಕ್ರಮ, 18 ರಂದು ಗೆಳೆಯರ ಬಳಗದ ವತಿಯಿಂದ ಗುರುವಂದನೆ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಸಂಸತಿ ಸಂಭ್ರಮ ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದೆ.
19 ರಂದು ಸಂಜೆ 5ಕ್ಕೆ ರಥೋತ್ಸವ, ರಾತ್ರಿ 10ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ, 20 ರಂದು ಬೆಳಗ್ಗೆ 10.30ಕ್ಕೆ ಭಾರ ಎತ್ತುವ ಸ್ಪರ್ಧೆ, ಸಂಜೆ 7ಕ್ಕೆ ಕುದುರೆ ಕುಣಿತ 7.30ಕ್ಕೆ ಮದ್ದು ಸುಡುವುದು, ರಾತ್ರಿ 9ಕ್ಕೆ ದೇವರ ಮೂರ್ತಿ ವಿಸರ್ಜನೆ, ರಾತ್ರಿ 10ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ.
ನ.18 ರಂದು ಜರುಗುವ ವಿವಿಧ ಕಾರ್ಯಕ್ರಮದಲ್ಲಿ ಮಸಿಬಿನಾಳ ವಿರಕ್ತಮಠದ ಸಿದ್ದರಾಮ ಶ್ರೀಗಳು, ಯರನಾಳದ ಗುರುಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಕುಂಟೋಜಿಯ ಡಾ.ಗುರು ಚನ್ನವಿರ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಬಸವನಬಾಗೇವಾಡಿ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಹುಣಶ್ಯಾಳ ಪಿ.ಬಿ.ಯ ಆನಂದ ದೇವರು ಸಮ್ಮುಖ ವಹಿಸಲಿದ್ದಾರೆ. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.