ಮಹಿಳಾ ಸಂಘದಿಂದ ಗೌರಿ ಪೂಜೆ

news 2 (1)
ಚಿಕ್ಕಮಗಳೂರಿನ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬನಶಂಕರಿ ಮಹಿಳಾ ಸಂಘದಿಂದ ಗೌರಿ-ಗಣೇಶ ಪೂಜೆ ನೆರವೇರಿಸಲಾಯಿತು. ಧನಲಕ್ಷ್ಮೀ, ರಾಧಾ, ಭಾರತಿ, ಗೀತಾ ಇತರರಿದ್ದರು.
Published on

ಚಿಕ್ಕಮಗಳೂರು: ಬನಶಂಕರಿ ಮಹಿಳಾ ಸಂಘದಿಂದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗೌರಿ-ಗಣೇಶ ಪೂಜೆ ನೆರವೇರಿಸಲಾಯಿತು.

ಗಂಗೆ ತಂದು ಲಲಿತಾ ಸಹಸ್ರನಾಮ ನಂತರ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮಹಿಳೆಯರೆಲ್ಲರೂ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ, ಬಟ್ಟಲು ಅಕ್ಕಿ, ಗೌರಿ ಎಳೆ, ಪ್ರಸಾದ ವಿತರಿಸಿದರು. ಸಂಘದ ಅಧ್ಯಕ್ಷೆ ಸುವರ್ಣಾ ಕೇಶವಮೂರ್ತಿ ಮಾತನಾಡಿ, 20 ವರ್ಷದಿಂದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗೌರಿ ಕೂರಿಸುತ್ತಿದ್ದೇವೆ ಎಂದರು. ಬನಶಂಕರಿ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗೋಕುಲ್, ಉಪಾಧ್ಯಕ್ಷೆ ರಾಧಾ ರಾಜ್‌ಕುಮಾರ್, ಖಜಾಂಚಿ ಶ್ಯಾಮಲಾ ರಾಜು, ನಿರ್ದೇಶಕಿಯರಾದ ಭಾರತಿ ರಂಗನಾಥ್, ಭಾಗ್ಯಾ ಮೋಹನ್, ಗೀತಾ ಗಂಗಾಧರ್, ಮಂಜುಳಾ ಪುಟ್ಟರಾಜು, ರತ್ನಾ ರವಿಕುಮಾರ್, ನಿರ್ಮಲಾ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net