ಗೌರಿ ಗಣೇಶ, ಈದ್ ಮಿಲಾದ್ ಪಥ ಸಂಚಲನ

21bkl2 PATHA SANCHALANA
Published on

ಭಟ್ಕಳ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ ನೇತೃತ್ವದಲ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಪಥ ಸಂಚಲನ (ರೂಟ್ ಮಾರ್ಚ್) ನಡೆಸಿದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ವಿಶ್ವಾಸ ತುಂಬಲು ಹಾಗೂ ಪೊಲೀಸ್ ಪಡೆಯ ಸನ್ನದ್ಧತೆ ಪ್ರದರ್ಶಿಸಲು ಪೊಲೀಸ್ ಪಡೆಯಿಂದ ಜನಸ್ನೇಹಿ ವ್ಯವಸ್ಥೆಯ ಭಾಗವಾಗಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದದಲ್ಲಿ ರೂಟ್ ಮಾರ್ಚ್ ನಡೆಸಿದರು.

ಬಂದರು ರಸ್ತೆಯಿಂದ ಹೊರಟ ಪಥ ಸಂಚಲನ ಶಂಶುದ್ದಿನ್ ಸರ್ಕಲ್​ನಿಂದ ತಾಲೂಕು ಪಂಚಾಯಿತಿ ಮುಂಭಾಗದಿಂದ ಪಿಎಲ್​ಡಿ ಬ್ಯಾಂಕ್ ಮಾರ್ಗವಾಗಿ ಹಳೇ ಬಸ್ ನಿಲ್ದಾಣದಿಂದ ಮಾರಿಕಟ್ಟೆ ಮಾರ್ಗವಾಗಿ ಹೊರಟ ಪಥ ಸಂಚಲನ ಚನ್ನಪಟ್ಟಣ ಹನುಮಂತ ದೇವಸ್ಥಾನ ಆವರಣದಲ್ಲಿ ಮುಕ್ತಾಯಗೊಂಡಿತು. ಡಿವೈಎಸ್ಪಿ ಶ್ರೀಕಾಂತ ಕೆ., ಸಿಪಿಐಗಳಾದ ಗೋಪಿ ಕೃಷ್ಣ ಹಾಗೂ ಚಂದನ ಗೋಪಾಲ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net