ಐತಿಹಾಸಿಕ ಗೌರಸಮುದ್ರ ಜಾತ್ರೆಗೆ ಚಾಲನೆ; ಮಾರಮ್ಮನ ಕ್ಷೇತ್ರಕ್ಕೆ ಬಂದ ಭಕ್ತರ ದಂಡು

Gaurasamudra Maramma Jatre Kondlahalli
Published on

ಕೊಂಡ್ಲಹಳ್ಳಿ: ಗೌರಸಮುದ್ರದ ಮಾರಮ್ಮದೇವಿ ಜಾತ್ರೆಗೆ ಭಾನುವಾರ ಚಾಲನೆ ದೊರೆತಿದ್ದು, ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಭಾನುವಾರ ಹುತ್ತಕ್ಕೆ ಅಭಿಷೇಕ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

29ರ ಸೋಮವಾರ ಅಮ್ಮನ ಮೂಲ ಸನ್ನಿಯಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಲಿವೆ. 30ರ ಮಂಗಳವಾರ ದೇವಿಯು ತುಂಬಲಿಗೆ ಆಗಮಿಸಿ, ಗೌರಸಮುದ್ರಕ್ಕೆ ವಾಪಸಾಗುವುದು. ನಂತರ ರಾತ್ರಿಯಿಡೀ ದೇವಿಯ ಮೆರವಣಿಗೆ ನಡೆಯಲಿದೆ. ಸೆ.1 ಗುರುವಾರ ಓಕುಳಿ, ರಾತ್ರಿ 8ಗಂಟೆಯಿಂದ ಮಾರಮ್ಮದೇವಿಯ ಮೆರವಣಿಗೆ, 2ರ ಶುಕ್ರವಾರ ಬೆಳಗ್ಗೆ ಮಹಾಮಂಗಳಾರತಿ ನಂತರ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net