ಗೌರಸಮುದ್ರ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಿ

24 CLK
Published on

ಚಳ್ಳಕೆರೆ: ತಾಲೂಕಿನ ಗಡಿಭಾಗ ಗೌರಸಮುದ್ರ ಗ್ರಾಮದ ಸರ್ಕಾರಿ ಹಿರಿಯ, ಪ್ರೌಢಶಾಲೆಗಳಿಗೆ ಹೆಚ್ಚುವರಿ ಕೊಠಡಿ ಮತ್ತು ಮೂಲ ಸೌಕರ್ಯಗಳಿಗೆ ಅವಕಾಶ ಕಲ್ಪಿಸಬೇಕೆಂದು ಮಂಗಳವಾರ ಡಿಡಿಪಿಐ ಎಂ.ಆರ್.ಮಂಜುನಾಥ ಅವರಿಗೆ ಗೌರಸಮುದ್ರ ಗ್ರಾಪಂ ಅಧ್ಯಕ್ಷ ಎಂ.ಓಬಣ್ಣ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಓಬಣ್ಣ, ಬಡಮಕ್ಕಳ ಶಿಕ್ಷಣ ಅನುಕೂಲಕ್ಕೆ ಸರ್ಕಾರಿ ಶಾಲೆಗಳು ಆಧಾರವಾಗಿವೆ. ಗಡಿಭಾಗ ಗೌರಸಮುದ್ರ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿಗೆ ನಿರೀಕ್ಷಿತ ದಾಖಲಾತಿ ಇದೆ. ಇಲ್ಲಿನ ಮಕ್ಕಳ ಗುಣಮಟ್ಟ ಶಿಕ್ಷಣ ಕಲಿಕೆಗೆ ಅಗತ್ಯ ಸೌಕರ್ಯಗಳು ಬೇಕಿದೆ. ಈಗಾಗಲೇ ಸ್ಥಳೀಯ ಪಂಚಾಯಿತಿ ವತಿಯಿಂದ ಶೌಚಗೃಹ ಸೇರಿದಂತೆ ವಿದ್ಯುತ್ ದೀಪಗಳ ಅನುಕೂಲ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ಹೆಚ್ಚುವರಿ ಕೊಠಡಿ ಮತ್ತು ಮೂಲ ಸೌಕರ್ಯಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಶಾಲಾ ಸಮಿತಿ ಅಧ್ಯಕ್ಷ ಜಿ.ಬಿ.ರಾಜಶೇಖರ, ಗ್ರಾಪಂ ಸದಸ್ಯರಾದ ಟಿ.ಶಶಿಕುಮಾರ್, ಎಂ.ಈರಣ್ಣ, ಮಹಾಂತೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net