

ಮಂಡ್ಯ: ವಿದ್ಯಾರ್ಥಿಗಳು ತಾವು ವಾಡುವ ಕೆಲಸದಲ್ಲಿ ಶ್ರದ್ಧೆ, ಕೌಶಲ ಹೊಂದಿದ್ದರೆ ಸಾರ್ಥಕ ಬರುತ್ತದೆ. ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವಂತೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎನ್.ಆರ್.ವೇಣುಗೋಪಾಲ್ ಸಲಹೆ ನೀಡಿದರು.
ನಗರದ ಎಸ್.ಬಿ ಗ್ರೀನ್ ಪ್ಯಾಲೇಸ್‌ನಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್, ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ವಾಂಡವ್ಯ ಕೈಗಾರಿಕಾ ತರಬೇತಿ ಸಂಸ್ಥೆ ಮದ್ದೂರು ವತಿಯಿಂದ ಆಯೋಜಿಸಿದ್ದ ಘಟಿಕೋತ್ಸವ ಸವಾರಂಭ ಉದ್ಘಾಟಿಸಿ ವಾತನಾಡಿದರು. ವಿದ್ಯಾರ್ಥಿಗಳ ಸೇವೆ ದೇಶ ಹಾಗೂ ವಿಶ್ವಕ್ಕೆ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕೌಶಲ ತರಬೇತಿ ಇಲಾಖೆ ಪ್ರಾರಂಭಿಸಿದೆ ಎಂದರು.
ಇಂದಿನ ಅಗತ್ಯತೆ ಕೌಶಲ ಆಗಿರುವುದರಿಂದ ತರಬೇತಿ ಆಧಾರದ ಮೇಲೆ ಉದ್ಯೋಗ ಪಡೆದು ದೇಶಕ್ಕೆ ಕೊಡುಗೆ ಕೊಡಬೇಕು. ವಿದ್ಯಾರ್ಥಿಗಳು ಪಡೆದುಕೊಂಡ ಜ್ಞಾನ, ಕಲಿತ ಕೌಶಲ, ಅಳವಡಿಸಿಕೊಂಡ ಮೌಲ್ಯಗಳು ಇವೆಲ್ಲವೂ ಉತ್ತಮ ಚಾರಿತ್ರೃ ನಿರ್ಮಿಸುವಲ್ಲಿ ಸಹಾಯಕವಾಗಿರುತ್ತದೆ ಎಂದರು.
ಎವರೆಡಿ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ಬಿ.ವಿ.ಎಸ್.ವಾರುತಿ ವಾತನಾಡಿದರು. ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೃ ಡಾ.ಬಿ.ಶಿವಲಿಂಗಯ್ಯ ಅಧ್ಯಕ್ಷೃತೆ ವಹಿಸಿದ್ದರು. ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ತಾವರರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಂ.ಸಿ.ಪ್ರವೀಣ್ ಕುವಾರ್, ವಾಂಡವ್ಯ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ವೈ.ಎಚ್.ಲೋಹಿತ್‌ಕುವಾರ್ ಇತರರಿದ್ದರು.
ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಗಳಾದ ತಾವರೆಗೆರೆ ಐಟಿಐ ಮಂಡ್ಯ ಮತ್ತು ವಾಂಡವ್ಯ ಐಟಿಐ ಮದ್ದೂರು ಈ ಎರಡು ಕಾಲೇಜುಗಳ ಒಟ್ಟು 80 ವಿದ್ಯಾರ್ಥಿಗಳಿಗೆ ಪ್ರವಾಣ ಪತ್ರವನ್ನು ವಿತರಿಸಲಾಯಿತು.