ಹಿರಿಯ ನಾಗರಿಕರ ಸಂಗಮ

sangama
Published on

ಪೆರ್ಲ: ಎಣ್ಮಕಜೆ ಗ್ರಾಪಂ, ಕುಟುಂಬ ಆರೋಗ್ಯ ಕೇಂದ್ರ ಪೆರ್ಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವಾಣಿನಗರ ಸಹಯೋಗದಲ್ಲಿ ಹಿರಿಯ ನಾಗರಿಕರ ಆರೋಗ್ಯ ಶಿಬಿರ ಇತ್ತೀಚೆಗೆ ನಡೆಯಿತು.

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ ಎಂ. ಅಧ್ಯಕ್ಷತೆ ವಹಿಸಿದರು. ಸದಸ್ಯ ಎಸ್.ಬಿ ನರಸಿಂಹ ಪೂಜಾರಿ, ಆರೋಗ್ಯ ಕೇಂದ್ರದ ವೈದ್ಯ ಡಾ.ಕೇಶವ ನಾಯ್ಕ, ಸಿ.ಡಿ.ಎಸ್. ಉಪಾಧ್ಯಕ್ಷೆ ಶಶಿಕಲಾ ಕೆ. ಮಾತನಾಡಿದರು. ರಂಗ ನಿರ್ದೇಶಕ ಉದಯ ಸಾರಂಗ್ ತರಗತಿ ನಡೆಸಿದರು.

ನಿವೃತ್ತ ಮುಖ್ಯಶಿಕ್ಷಕಿ ಪ್ರೇಮ ಎ.ಎಸ್, ಐತ್ತಪ್ಪ ನಾಯ್ಕ ದೇಲಂತಾರು, ಶಾರದಾ ಪಿ.ಎಸ್ ಕಟ್ಟೆ ಅವರನ್ನು ಅಭಿನಂದಿಸಲಾಯಿತು. ಆಶಾ ಕಾರ್ಯಕರ್ತೆ ಚಂದ್ರಾವತಿ ಎ.ಟಿ. ಪ್ರಾರ್ಥಿಸಿದರು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಹರೀಶ್ ಸ್ವಾಗತಿಸಿದರು. ಜೆ.ಪಿ.ಎಚ್.ಎನ್ ಭಾಗೀರಥಿ ಬಿ. ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net