

ಮಂಗಳೂರು ವಿಶ್ವವಿದ್ಯಾನಿಲಯ ನಿಕಟಪೂರ್ವ ಉಪಕುಲಪತಿ ಪ್ರೊ. ಯಡಪಡಿತ್ತಾಯ ಕಾಲಾವಧಿಯಲ್ಲಿ ವಿವಿ ತನ್ನ ಆದಾಯಕ್ಕಿಂತ ಜಾಸ್ತಿ ಆಡಂಬರದ ದುಂದು ವೆಚ್ಚದ ಪರಿಣಾಮ ವಿವಿ ಖಜಾನೆ ಪೂರ್ಣ ಪ್ರಮಾಣದಲ್ಲಿ ಬರಿದಾಗಿದ್ದು, ವಿವಿ ಖರ್ಚು ವೆಚ್ಚವನ್ನು ನಿಯಂತ್ರಿಸಿ ಸರಿದೂಗಿಸಲು 180ಕ್ಕೂ ಅಧಿಕ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ನಿರ್ಧಿರಿಸಿದೆ.
ಹಿಂದಿನ ಉಪಕುಲಪತಿ ಪ್ರೊ. ಯಡಪಡಿತ್ತಾಯ ಕಾಲಾವಧಿಯಲ್ಲಿ ವಿವಿಯಲ್ಲಿ ಖಾಲಿಯಿರುವ ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಹೆಚ್ಚುವರಿಯಾಗಿ 300ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಉಪಕುಲಪತಿ ಕಚೇರಿಯಿಂದ ಹಣ ಪಡೆದು ಸಿಬ್ಬಂದಿಗಳನ್ನು ನಿಯೋಜಿಸಿರುವ ಬಗ್ಗೆಯೂ ಆರೋಪ ಕೇಳಿ ಬಂದಿತ್ತು. ವಿವಿಯಲ್ಲಿರುವ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಿಬ್ಬಂದಿಗೆ ಈ ಹೆಚ್ಚುವರಿ ಸಿಬ್ಬಂದಿಗಳೇ ಅಸಿಸ್ಟೆಂಟ್. ಬಹುತೇಕರಿಗೆ 28 ರಿಂದ 29 ಸಾವಿರ ರೂ.ವರೆಗೆ ವಿವಿಯಿಂದ ವೇತನ. ಇವರಿಗೆ ವೇತನ ನೀಡಲು ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿಯ ಹಣ ಬಳಸಿದ್ದರಿಂದ ವಿವಿ ಖಜಾನೆ ಬರಿದಾಗಿತ್ತು. ವಿವಿಯಲ್ಲಿರುವ ಹೆಚ್ಚುವರಿ ಸಿಬ್ಬಂದಿಯನ್ನು ಹೊರಹಾಕಿದ ನಂತರವೇ ಸರ್ಕಾರದಿಂದ ಪೆಂಕ್ಷನ್ ಫಂಡ್ ಸಹಿತ ವಿವಿಧ ಅನುಧಾನ ಬಿಡುಗಡೆಗೆ ಎಂಬುದಾಗಿ ಸರ್ಕಾರ ಷರತ್ತು ಕೂಡ ವಿಧಿಸಿತ್ತು.
*ವೇತನ ನೀಡಲೂ ಪರದಾಡಿದ ವಿವಿ
ಮಂಗಳೂರು ವಿವಿ ವ್ಯಾಪ್ತಿಯಲ್ಲಿ 1980ರಿಂದ ಈವರೆಗೆ ಮಂಜೂರಾದ 273 ಕಾಯಂ ಹುದ್ದೆಗಳ ಪೈಕಿ 144 ಹುದ್ದೆ ಭರ್ತಿಯಾಗಿದೆ. 129 ಹುದ್ದೆ ಖಾಲಿ ಇದೆ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆ ಪೈಕಿ 189 ಹುದ್ದೆ ಭರ್ತಿಯಾಗಿದ್ದು, 358 ಹುದ್ದೆ ಖಾಲಿ ಇದೆ. 2018-2023ರ ಕಾಲಾವಧಿಯಲ್ಲಿ ಈ ಭರ್ತಿಯಾಗದ ಹುದ್ದೆಗಳ ಬದಲಾಗಿ ಲೆಕ್ಕಕ್ಕಿಂತ ಜಾಸ್ತಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿರುವುದು ವಿವಿ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಕಳೆದ ಒಂದೂವರೆ ವರ್ಷದಿಂದ ಸಿಬ್ಬಂದಿಗಳಿಗೆ ವೇತನ ನೀಡಲೂ ವಿವಿ ಪರದಾಡಿದ ನಿದರ್ಶನ ಇತ್ತು.
ವಿವಿ ಉದ್ಯೋಗಿಗಳಿಗೆ ಗೇಟ್‌ಪಾಸ್
ತೀವ್ರ ಆರ್ಥಿಕ ಜರ್ಜರಿತಕ್ಕೊಳಗಾದ ಮಂಗಳೂರು ವಿವಿಯನ್ನು ಸರಿದಾರಿಗೆ ತರಲು ಹಾಲಿ ಉದ್ಯೋಗಿಗಳನ್ನು ವಿವಿ ಕರ್ತವ್ಯದಿಂದ ಕೈಬಿಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ 2020ರಿಂದ ವಿವಿಯಲ್ಲಿ ಕರ್ತವ್ಯ ನಿರ್ವಹಿಸುವ 'ಗ್ರೂಪ್ ಡಿ' ಹಾಗೂ 'ಗ್ರೂಪ್ ಬಿ' ಗ್ರೇಡ್‌ನ 180 ನೌಕರರನ್ನು ಮುಂದಿನ 1 ತಿಂಗಳ ವರೆಗೆ ಮಾತ್ರ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದೆ. ಆದರೆ ವಿವಿಯ ಏಕಾಏಕಿ ನಿರ್ಧಾರದಿಂದ ಖಾಸಗಿ ನೌಕರರನ್ನು ಬೇಕಾಬಿಟ್ಟಿ ದುಡಿಸುತ್ತಿದ್ದ ವಿವಿ ಪೂರ್ಣಕಾಲಿಕ ಉದ್ಯೋಗಿಗಳಿಗೆ ಹೆಚ್ಚುವರಿ ಕರ್ತವ್ಯದ ಭಯ ಆವರಿಸಿದೆ.
ಹೆಚ್ಚುವರಿ ಸಿಬ್ಬಂದಿಗಳಿಂದ ವಿವಿಗೆ ನಷ್ಠ
ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರವಾಗಿರು ಮಂಗಳೂರು ವಿಶ್ವವಿದ್ಯಾಲಯ ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿ ಖಾಲಿಯಾಗಿ ದಿವಾಳಿಯಾಗಿದೆ. ಈ ಹಿಂದೆ ಇದ್ದ ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿಯಲ್ಲಿದ್ದ ಹಣವನ್ನು ಆಂತರಿಕ ಖರ್ಚು, ಸಿಬ್ಬಂದಿಗಳ ವೇತನಗಳಿಗೆ ಬಳಸಿದ್ದರಿಂದ ವಿವಿ ಖಜಾಣೆ ಬರಿದಾಗಿದೆ. ವಿವಿಯಲ್ಲಿ ಆಯ್ಕೆಯಾದ ಹೆಚ್ಚುವರಿ ಸಿಬ್ಬಂದಿಗಳ ವೇತನ ನೋಡಿದರೆ ಸರ್ಕಾರ ವೇತನಕ್ಕಿಂತಲೂ ಅಧಿಕ. ವಿವಿಯಲ್ಲಿರುವ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಿಬ್ಬಂದಿಗೆ ಈ ಹೆಚ್ಚುವರಿ ಸಿಬ್ಬಂದಿಗಳೇ ಅಸಿಸ್ಟೆಂಟ್. ಬಹುತೇಕರಿಗೆ 28 ರಿಂದ 29 ಸಾವಿರ ರೂ.ವರೆಗೆ ವಿವಿಯಿಂದ ವೇತನ. ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಯ ಆಂತರಿಕ ಪರಿಶೋಧನೆಯ ರದಿತಂತೆ ವಿವಿ ತನ್ನ ಅನುದಾನವನ್ನು ತಾತ್ಕಲಿಕ ಸಿಬ್ಬಂದಿ ಹಾಗೂ ಒರಗುತ್ತಿಗೆ ಸಿಬ್ಬಂದಿಗಳ ವೇತನಕ್ಕೆಂದೇ ಹೆಚ್ಚಾಗಿ ವಿನಿಯೋಗಿಸಿರುವುದರ ವಿವಾರ ಬೆಳಕಿಗೆ ಬಂದಿರುವುದರಿಂದ ಸರ್ಕಾರದಿಂದ ನೀಡುವ ಪೆಂಕ್ಷನ್ ಫಂಡ್ ಸಹಿತ ಇನ್ನಿತರೆ ಅನುದಾನವನ್ನು ತಡೆಹಿಡಿದಿದೆ.
ಮಂಗಳೂರು ವಿವಿ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ದಿಗೆ ನೀಡಿದ ಅನುದಾನವನ್ನೆಲ್ಲ ಸಿಬ್ಬಂದಿಗಳ ವೇತನಕ್ಕೆ ಬಳಸಿದರೆ ಶೈಕ್ಷಣಿಕ ಅಭಿವೃದ್ದಿ ಹೇಗೆ ಸಾಧ್ಯ. ಇದೇ ಕಾರಣದಿಂದ ವಿವಿ ತನ್ನ ಗುಣಮಟ್ಟ ಕಳೆದುಕೊಂಡಿರುವುದು. ವಿವಿಗೆ ಸ್ಫಷ್ಠವಾದ ಆರ್ಥಿಕ ನೀತಿ ರೂಪಿಸಲು ತಿಳಿಸಲಾಗಿದೆ, ಹೆಚ್ಚುವರಿ ಸಿಬ್ಬಂದಿಗಳಿಗೆ ಕಡಿವಾಣ, ದುಂದುವೆಚ್ಚ, ಖರ್ಚುವೆಚ್ಚಗಳಿಗೆ ಪೂರ್ಣ ಪ್ರಮಾಣದ ನಿಯಂತ್ರಣ ಸಾಧ್ಯವಾದ ಬಳಿಕ ಕೆಲವು ಪ್ರಮುಖ ಶೈಕ್ಷಣಿಕ ಯೋಜನಾ ಅನುದಾನಗಳನ್ನು ತಕ್ಷಣದಲ್ಲಿ ಬಿಡುಗಡೆಗೊಳಿಸಲಾಗುವುದು.
ಡಾ.ಎಂ.ಸಿ.ಸುಧಾಕರ್,
ಉನ್ನತ ಶಿಕ್ಷಣ ಇಲಾಖೆ ಸಚಿವ