ಮುರರಾಯನಹಳ್ಳಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

19 pvg 2
Published on

ಪಾವಗಡ: ದೊಮ್ಮತಮರಿ ಗ್ರಾಪಂ ವ್ಯಾಪ್ತಿಯ ಮುರರಾಯನಹಳ್ಳಿಯಲ್ಲಿ ಭಾನುವಾರ ರಾತ್ರಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಕುಣಿಗಲ್ ತಾಲೂಕಿನ ಎಡೆಯೂರು ಗ್ಯಾಸ್ ಫಿಲ್ಲಿಂಗ್ ಕೇಂದ್ರದಿಂದ ಬಂದ ಲಾರಿ ಮಡಕಶಿರಾದಿಂದ ಪೆನುಗೊಂಡಗೆ ಹೋಗುವ ಮಾರ್ಗಮಧ್ಯೆ ಪಲ್ಟಿಯಾಗಿದೆ. ಪ್ರಾಣಾಪಾಯ ಸಂಭವಿಸಿಲ್ಲ. 3 ತಿಂಗಳ ಹಿಂದೆಯಷ್ಟೆ ಇದೇ ಸ್ಥಳದಲ್ಲಿ ಟ್ಯಾಂಕರ್ ಬಿದ್ದಿದ್ದರಿಂದ ಗ್ಯಾಸ್ ಸೋರಿಕೆಯಾಗಿ ಇಡೀ ಗ್ರಾಮದ ಜನತೆ ಮನೆ ಖಾಲಿ ಮಾಡಿಕೊಂಡು ಹೊಲಗಳಲ್ಲಿ ಬೀಡು ಬಿಟ್ಟಿದ್ದರು. ಆಗ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಭೇಟಿ ನೀಡಿದ್ದರು. ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದರೂ ಪ್ರಯೋಜನವಾಗಿಲ್ಲ.

ತಹಸೀಲ್ದಾರ್ ಕೆ.ಆರ್.ನಾಗರಾಜು, ಅಗ್ನಿಶಾಮಕ ಠಾಣಾಧಿಕಾರಿಗಳು ಸ್ಥಳ ಪರಿಶೀಲಿಸಿದರು. ಕ್ರೇನ್‌ಗಳ ಮುಖಾಂತರ ಟ್ಯಾಂಕರ್ ತೆರವುಗೊಳಿಸಲಾಯಿತು. ಗ್ರಾಮ ಲೆಕ್ಕಿಗ ಆರ್.ಎ.ಅರುಣ್ ಕುಮಾರ್ ಹಾಗೂ ಪಾವಗಡ ಠಾಣೆ ಸಿಬ್ಬಂದಿ ಇದ್ದರು.

ಗ್ರಾಮದಲ್ಲಿ ಇದುವರೆಗೂ 2 ಗ್ಯಾಸ್ ಟ್ಯಾಂಕರ್‌ಗಳು ಉರುಳಿ ಬಿದ್ದಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಈ ಮಾರ್ಗದ ಮೂಲಕ ಯಾವುದೇ ಗ್ಯಾಸ್ ಟ್ಯಾಂಕರ್‌ಗಳು ಸಂಚರಿಸದ ಹಾಗೇ ಆಂಧ್ರ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಲಾಗಿದೆ. ನಾಗರಾಜು, ಪಾವಗಡ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ರಸ್ತೆಯಲ್ಲಿ ತಿರುವುಗಳಿದ್ದು, ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು. ಗೋವಿಂದಪ್ಪ, ಮುರರಾಯನಹಳ್ಳಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net