

ಮುಂಡಗೋಡ: ತಾಲೂಕಿನ ಚಿಗಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅನಿಲ ಕಲಾಲ, ಉಪಾಧ್ಯಕ್ಷರಾಗಿ ಫಕೀರಸ್ವಾಮಿ ಬಂಕಾಪುರ ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್ 2 ಹಾಗೂ ಬಿಜೆಪಿ ಬೆಂಬಲಿತ 10 ಸದಸ್ಯರು ಆಯ್ಕೆಯಾಗಿದ್ದು, ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅನಿಲ ಕಲಾಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಫಕೀರಸ್ವಾಮಿ ಇಬ್ಬರೇ ನಾಮಪತ್ರ ಸಲ್ಲಿಸಿದ ಪರಿಣಾಮ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಅಧಿಕಾರಿ ಶಕ್ತಿಕುಮಾರ್ ಜಂಬಗಿ ಹಾಗೂ ಸಂಘದ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಮುಖಂಡರಾದ ಎಲ್.ಟಿ. ಪಾಟೀಲ, ಡಿ.ಎಫ್. ಮಡ್ಲಿ, ಮಂಜುನಾಥ ಪಾಟೀಲ, ಸಂತೋಷ ತಳವಾರ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.