ಗ್ಯಾಸ್ ಸೋರಿಕೆಯಿಂದ ಬೆಂಕಿ ತಗುಲಿ ಶಾಲೆ ಅಡುಗೆ ಸಹಾಯಕಿಯರಿಗೆ ಗಾಯ

Gas Leakage
Published on

ಗುರುಪುರ: ಅಡ್ಡೂರಿನ ದ.ಕ.ಜಿ.ಪ. ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳಗ್ಗೆ ಗ್ಯಾಸ್ ಸೋರಿಕೆಯಿಂದ ಬೆಂಕಿ ತಗುಲಿ ಶಾಲೆಯ ಬಿಸಿಯೂಟ ತಯಾರಿಸುವ ಸಹಾಯಕಿಯರಿಬ್ಬರಿಗೆ ಸುಟ್ಟ ಗಾಯಗಳಾಗಿವೆ.

ಮಾಲತಿ(52), ಕಮಲಾ(46) ಗಾಯಗೊಂಡವರು. ಅವರ ಕೈ ಮತ್ತು ಮೈಗೆ ಗಾಯವಾಗಿದ್ದು, ತಕ್ಷಣ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಗೆ ಬಿಸಿಯೂಟ ತಯಾಸಲು ಸಿದ್ಧತೆ ನಡೆಸುತ್ತಿದ್ದ ಓರ್ವ ಮಹಿಳೆ ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚಿದಾಗ ಒಮ್ಮೆಲೇ ಅಡುಗೆ ಕೋಣೆಯಲ್ಲಿ ಬೆಂಕಿ ಹರಡಿಕೊಂಡಿದೆ. ಅಡುಗೆ ಕೋಣೆಯಿಂದ ಬೊಬ್ಬೆ ಕೇಳುತ್ತಲೇ ಶಾಲೆಯಲ್ಲಿದ್ದ ಶಿಕ್ಷಕರ ಸಹಿತ ಇತರರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಮಾಹಿತಿ ಪಡೆದ ಬಜ್ಪೆ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಗ್ಯಾಸ್ ಸೋರಿಕೆಗೆ ಸ್ಪಷ್ಟ ಕಾರಣವೇನೆಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net