ಗ್ಯಾಸ್ ಸಿಲಿಂಡರ್ ಮನೆಯಲ್ಲಿದೆಯಾ ಪರೀಕ್ಷಿಸಿ ! - ವಿಟ್ಲ ಠಾಣಾ ವ್ಯಾಪ್ತಿಯಲ್ಲಿ 15ರಷ್ಟು ಸಿಲಿಂಡರ್ ನಾಪತ್ತೆ - ಕಳ್ಳರಿದ್ದಾರೆ ಎಚ್ಚರ

theft home
Published on

ವಿಟ್ಲ: ಮನೆಯ ಹೊರಗೆ ಇಟ್ಟ ಗ್ಯಾಸ್ ಸಿಲಿಂಡರುಗಳನ್ನು ಕಳವು ಮಾಡುವ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದ್ದು, ಗ್ರಾಮೀಣ ಭಾಗದ ಜನರಿಗೆ ಆತಂಕ ಸುರುವಾಗಿದೆ.

ಅನಂತಾಡಿ ಭಾಗದಲ್ಲಿ ವಿವಿಧ ಮನೆಯಿಂದ ಸುಮಾರು 10ಸಿಲಿಂಡರ್ ಕಳವು ಮಾಡಲಾಗಿದೆ. ಕೇಪು ಗ್ರಾಮದ ನೀರ್ಕಜೆ ಭಾಗದಲ್ಲಿ ಸುಮಾರು ಸಿಲಿಂಡರ್ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಗ್ಯಾಸ್ ಸಿಲಿಂಡರ್ ಕಳೆದುಕೊಂಡ ಮನೆ ಮಂದಿ ಕಂಗಾಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಲೇರುವ ಚಿಂತನೆ ನಡೆಸಿದ್ದಾರೆ. ಪೊಲೀಸ್ ವ್ಯವಸ್ಥೆ ರಾತ್ರಿ ಸಮಯ ಸರಿಯಾಗಿ ಬೀಟ್ ಬರದೇ ಇರುವುದು ಕಳ್ಳರಿಗೆ ವರದಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net