

ಬೆಂಗಳೂರು: ರಾಜಧಾನಿಯ ಹೋಟೆಲೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹೋಟೆಲ್ನ ಏಳು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಇಂದಿರಾನಗರದ ಎಚ್ಡಿಎಫ್ಸಿ ಸಿಗ್ನಲ್ ಬಳಿ ನ್ಯೂ ಶಾಂತಿ ಸಾಗರ್ ಹೋಟೆಲ್ನಲ್ಲಿ ಈ ಅವಘಡ ಸಂಭವಿಸಿದೆ.
ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಈ ಹೋಟೆಲ್ನ ಕಿಚನ್ನಲ್ಲಿ ಗ್ಯಾಸ್ ಸೋರಿಕೆಯ ವಾಸನೆ ಬಂದ ಕಾರಣ, ಸಿಬ್ಬಂದಿ ಪರೀಕ್ಷಿಸಿಲೆಂದು ಬಳಿಗೆ ಹೋದ ಸಂದರ್ಭದಲ್ಲೇ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.
ಗ್ಯಾಸ್ ಲೀಕ್ ಆಗುತ್ತಿದ್ದಂತೆ ಗ್ರಾಹಕರನ್ನು ಸಿಬ್ಬಂದಿ ಹೊರಗಡೆ ಕಳಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಹೋಟೆಲ್ನ ಏಳು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹೊಟೆಲ್ ಸಿಬ್ಬಂದಿಗಳಾದ ನರಸಿಂಹ (50), ಜಗ್ಗ (52), ಗಂಗಾಧರ (38), ಕೃಷ್ಣ (23), ಕೃಷ್ಣ (54) ಸೇರಿ 7 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಮೂವರು ಸಿಬ್ಬಂದಿ ಉತ್ತರ ಭಾರತ ಮೂಲದವರು.