ಗ್ಯಾಸ್ ಸ್ಫೋಟಕ್ಕೆ ಆಹಾರ ತಯಾರಿ ಘಟಕ ಮಾಲೀಕ ಬಲಿ

gas blast
Published on

ಕೋಟ: ಐರೋಡಿ ಗ್ರಾಪಂ ವ್ಯಾಪ್ತಿಯ ಹಂಗಾರಕಟ್ಟೆ ಸಮೀಪವಿರುವ ರುಚಿ ಫ್ಯಾಕ್ಟರಿಯಲ್ಲಿ ಸೋಮವಾರ ಮುಂಜಾನೆ ಗ್ಯಾಸ್ ಸ್ಫೋಟಗೊಂಡು ಮಾಲೀಕ ರೋಬರ್ಟ್ ಫುರ್ಟಾಡೊ ಮೃತಪಟ್ಟಿದ್ದಾರೆ.

ಕಳೆದ ಹಲವು ದಿನ ಬಂದ್ ಮಾಡಲಾಗಿದ್ದ ಬೇಕರಿ ಆಹಾರ ತಯಾರಿಸುವ ಘಟಕಕ್ಕೆ ರೋಬರ್ಟ್ ಫುರ್ಟಾಡೊ ಸೋಮವಾರ ತೆರಳಿದ್ದರು.

ಅವರು ಮೈಕ್ರೋ ಒವೆನ್ ಚಾಲನೆ ಮಾಡಿದ ವೇಳೆ ಬೇಕರಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೋಟ ಆರಕ್ಷಕ ಠಾಣಾಧಿಕಾರಿ, ಬ್ರಹ್ಮಾವರ ವೃತ್ತ ನೀರಿಕ್ಷಕ, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net