

ಹಾವೇರಿ: ಗ್ಯಾಸ್ ಏಜೆನ್ಸಿ ಕಚೇರಿಯ ಬಾಗಿಲು ಮುರಿದು ಅದರಲ್ಲಿದ್ದ 15 ಲಕ್ಷ ರೂ. ನಗದನ್ನು ಯಾರೋ ದೋಚಿದ ಟನೆ ನಗರದ ಅಜ್ಜಯ್ಯನ ಗದ್ದುಗೆ ಬಳಿ ನಡೆದಿದೆ.
ಇಲ್ಲಿಯ ಮಾರುತಿ ನಗರದ ನಾಗರಾಜ ಬೀರಪ್ಪ ಬಡ್ಡಿ (38) ಎಂಬುವರಿಗೆ ಸೇರಿ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನವಾಗಿರುವುದು.
ಇವರ ನರ್ಮದಾ ಭಾರತ ಗ್ಯಾಸ್ ಏಜೆನ್ಸಿಯ ಕಚೇರಿಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಖರೀಮರು ಅದರಲ್ಲಿದ್ದ 15 ಲಕ್ಷ ರೂ. ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.