ಕಲ್ಲೇಶ್ವರ ಸ್ವಾಮಿಗೆ ದವಸಧಾನ್ಯದ ಅಲಂಕಾರ

KDR kaa
ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು.
Published on

ಕಡೂರು: ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ಧನುರ್ಮಾಸ ಪೂಜೆ ಕೊನೆಯ ದಿನದ ಅಂಗವಾಗಿ ದೇವರಿಗೆ ದವಸಧಾನ್ಯಗಳೊಂದಿಗೆ ದೀಪಾಲಂಕಾರ ಮಾಡಿ ಪೂಜಿಸಲಾಯಿತು.

ಅಲಂಕಾರದಿಂದ ದೇವರು ಕಂಗೊಳಿಸುತ್ತಿದ್ದುದನ್ನು ಭಕ್ತರು ಕಣ್ತುಂಬಿಕೊಂಡರು. ಒಂದು ತಿಂಗಳಿನಿಂದ ಧನುರ್ಮಾಸದ ಪ್ರಯುಕ್ತ ಸ್ವಾಮಿಗೆ ಪ್ರತಿನಿತ್ಯ ವಿಶೇಷ ಅಲಂಕಾರದೊಂದಿಗೆ ಪೂಜಾಕೈಕಂರ್ಯ ನೆರವೇರಿಸಲಾಯಿತು. ಪ್ರಧಾನ ಅರ್ಚಕ ಪ್ರಭುಕುಮಾರ್‌ಶಾಸ್ತ್ರಿ, ತೋಟೇಂಶ್ ಶಾಸ್ತ್ರಿ, ಕೀರ್ತಿ ಪ್ರಸಾದ್, ಮಧು, ಚೇತನ್, ಶಿವಕುಮಾರ್ ಅವರು ಸ್ವಾಮಿಗೆ ಹಾಗೂ ಪಾರ್ವತಿ ದೇವಿಗೆ ಆಕರ್ಷಕ ಅಲಂಕಾರ ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net